ಕಣ್ಣಿಗೆ ಕಾಣುವ ದೇವರ ಹೆಸರೇ ಇಟ್ಟಿದ್ದಾರೆ-ಡಾ|ಕೆ.ಸಿ.ನಾೖಕ್
ವಿಜಯದಶಮಿ ದಿನ ಆರಂಭವಾದ ಕೆಲಸ ಯಶಸ್ವಿ-ನಳಿನ್ ಕುಮಾರ್ ಕಟೀಲ್
ಪುತ್ತೂರಿನಲ್ಲಿ ಇಂತಹ ಕಟ್ಟಡ, ಉದ್ಯಮ ಆರಂಭವಾಗಬೇಕು-ಅಶೋಕ್ ಕುಮಾರ್ ರೈ
ಶ್ರೀಮಹಾಲಿಂಗೇಶ್ವರ ದೇವರ ವರವಾಗಿದೆ-ಸುಬ್ರಾಯ ಕೊಳಕೆಮಾರ್
ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಿದ್ದಾರೆ-ಸಂಜೀವ ಮಠಂದೂರು
ಶ್ರದ್ದೆಯಿಂದ ಮಾಡಿದ ಕೆಲಸಕ್ಕೆ ಭಗವಂತನ ಅನುಗ್ರಹ ಇದೆ-ಕಿಶೋರ್ ಕುಮಾರ್
ತಾಯಿಯ ಆಶಯವನ್ನು ಇಡೀ ಕುಟುಂಬ ಈಡೇರಿಸಿದೆ-ದಯಾನಂದ ಶೆಟ್ಟಿ ಉಜಿರೆಮಾರ್
ಉತ್ತಮವಾದ ಕೊಡುಗೆಯನ್ನು ಪುತ್ತೂರಿಗೆ ನೀಡಿದ್ದಾರೆ-ಶಿವಕುಮಾರ್ ಕಲ್ಲಿಮಾರ್
ಸರಳ ಸಜ್ಜನಿಕೆಯ ಸಹೋದರರ ಉದ್ಯಮ ಬೆಳೆಯಲಿ-ಸಹಜ್ ರೈ ಬಳೆಜ್ಜ
ವಿಜಯದಶಮಿ ದಿನ ಕಟ್ಟಡ ಲೋಕಾರ್ಪಣೆ ಮಾಡಿದ್ದಾರೆ-ಅರುಣ್ ಕುಮಾರ್ ಪುತ್ತಿಲ
ಹಲವು ಸವಾಲುಗಳನ್ನು ಮೆಟ್ಟಿ ಭವ್ಯ ಕಟ್ಟಡ ನಿರ್ಮಾಣವಾಗಿದೆ-ಉಮೇಶ್ ನಾಯಕ್
ಸಹೋದರರಿಂದ ಮುಂದೆಯೂ ಇಂತಹ ನಿರ್ಮಾಣಗಳು ಬರಲಿ-ಡಾ.ಹರಿಕೃಷ್ಣ ಪಾಣಾಜೆ
ಪುತ್ತೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ-ಕುಸುಮರಾಜ್
ಪುತ್ತೂರು: ಬೈಪಾಸ್ ಹೆದ್ದಾರಿಯ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಸಪ್ತಗಿರಿ ಗ್ರೂಪ್ಸ್ನವರಿಂದ ನಿರ್ಮಾಣಗೊಂಡ “ಪುಷ್ಪಾ ಸ್ಕ್ವೇರ್” ವಾಣಿಜ್ಯ ಸಂಕೀರ್ಣ ಅ.2ರಂದು ಶುಭಾರಂಭಗೊಂಡಿತು. ವಾಣಿಜ್ಯ ಸಂಕೀರ್ಣದ ಮಾಲಕರ ತಂದೆ, ಪ್ರಗತಿಪರ ಕೃಷಿಕರೂ ಆಗಿರುವ ಸುಬ್ರಾಯ ನಾೖಕ್ ಕೊಳಕೆಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಶಕ್ತಿ ಸಮೂಹ ಸಂಸ್ಥೆಯ ಡಾ|ಕೆ.ಸಿ.ನಾಕ್ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದರು.

ಕಣ್ಣಗೆ ಕಾಣುವ ದೇವರ ಹೆಸರೇ ಇಟ್ಟಿದ್ದಾರೆ-ಡಾ|ಕೆ.ಸಿ.ನಾೖಕ್
ಡಾ.ಕೆ.ಸಿ.ನಾೖಕ್ ಮಾತನಾಡಿ ಈಗಿನ ಕಾಲಘಟ್ಟದಲ್ಲಿ ಹಣ ಪ್ರತಿಯೊಬ್ಬರಿಗೂ ಮುಖ್ಯ. ಹಣ ಇಲ್ಲದೆ ಯಾವ ಕಾರ್ಯವೂ ಮುಂದೆ ಹೋಗುವುದಿಲ್ಲ. ಸುಬ್ರಾಯ ನಾೖಕ್ ಹಾಗೂ ಅವರ ಮಕ್ಕಳು ವಾಣಿಜ್ಯ ಸಂಕೀರ್ಣ ಮಾಡಿದ್ದಾರೆ. ಮಕ್ಕಳ ತಾಯಿಯ ಹೆಸರನ್ನೇ ಸಂಕೀರ್ಣಕ್ಕೆ ಇಟ್ಟಿದ್ದಾರೆ. ಕಣ್ಣಗೆ ಕಾಣುವ ದೇವರೆಂಬ ತಾಯಿಯ ಹೆಸರನ್ನೇ ಇಟ್ಟಿದ್ದಾರೆ. ಇಂತಹ ಸಂಕೀರ್ಣ ಪುತ್ತೂರಿಗೆ ಅವಶ್ಯಕತೆ ಇದೆ. ಎಂದು ಹೇಳಿ ಶುಭ ಹಾರೈಸಿದರು.
ಶ್ರೀಮಹಾಲಿಂಗೇಶ್ವರ ದೇವರ ವರವಾಗಿದೆ-ಸುಬ್ರಾಯ ಕೊಳಕೆಮಾರ್
ಸುಬ್ರಾಯ ಕೊಳಕ್ಕೆಮಾರ್ ಮಾತನಾಡಿ, ಇದು ಶ್ರೀಮಹಾಲಿಂಗೇಶ್ವರ ದೇವರ ಸಾನಿಧ್ಯ ಅಭಿವೃದ್ಧಿಯಾಗುತ್ತಿದೆ. ಇದು ಶ್ರೀಮಹಾಲಿಂಗೇಶ್ವರ ದೇವರ ವರವಾಗಿದೆ. ಮುಂದೆಯೂ ಇಂತಹ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡುವ ಅನುಗ್ರಹ ಸಿಗಲಿ ಎಂದು ಹೇಳಿದರು.
ವಿಜಯದಶಮಿ ದಿನ ಆರಂಭವಾದ ಕೆಲಸ ಯಶಸ್ವಿಯಾಗುತ್ತದೆ-ನಳಿನ್ ಕುಮಾರ್ ಕಟೀಲ್
ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಮಾತನಾಡಿ ಬೆಳೆಯುತ್ತಿರುವ ಪುತ್ತೂರು ವಾಣಿಜ್ಯ, ವ್ಯಾಪಾರ ಕ್ಷೇತ್ರಕ್ಕೆ ಅನುಕೂಲವಾಗಿರುವ ನಗರ. ಈ ಕಟ್ಟಡದ ಎದುರಿನ ಹೆದ್ದಾರಿ ಮುಂದಿನ ದಿನಗಳಲ್ಲಿ ಚತುಷ್ಪಥ ರಸ್ತೆಯಾಗಿ ಬದಲಾವಣೆಯಾಗಲಿದೆ. ಇಂತಹ ಹೆದ್ದಾರಿಯ ಬದಿಯಲ್ಲೇ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದಕ್ಕಾಗಿ ಅಭಿನಂದನೆ ಸಲ್ಲಿಸಿದರು. ವಿಜಯದಶಮಿ ದಿನ ಆರಂಭವಾದ ಕೆಲಸ ಯಾವಾಗಲೂ ಯಶಸ್ವಿಯಾಗುತ್ತದೆ. ಬೇರೆ ಬೇರೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇದೀಗ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದ್ದಾರೆ. ಈ ಕಟ್ಟಡಕ್ಕೆ ಭಗವಂತನ ಪೂರ್ಣ ಅನುಗ್ರಹ ಪ್ರಾಪ್ತಿಯಾಗಿ ಹತ್ತಾರು ಸಂಕೀರ್ಣಗಳನ್ನು ನಿರ್ಮಾಣ ಮಾಡುವ ಯೋಗ ಭಾಗ್ಯ ಸಿಗಲಿ ಎಂದು ಹಾರೈಸಿದರು.
ಪುತ್ತೂರಿನಲ್ಲಿ ಇಂತಹ ಕಟ್ಟಡ, ಉದ್ಯಮ ಆರಂಭವಾಗಬೇಕು-ಅಶೋಕ್ ಕುಮಾರ್ ರೈ
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇವತ್ತು ಪುತ್ತೂರಿನಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಿ ಸಮಾಜಕ್ಕೆ ಅರ್ಪಣೆಯಾಗಿದೆ. ಪುತ್ತೂರಿನಲ್ಲಿ ಯಾವುದೇ ಕಟ್ಟಡ, ಉದ್ಯಮ ಆರಂಭವಾದರೆ ನಾವು ಸಂತೋಷದಿಂದ ಶುಭಹಾರೈಸುತ್ತೇವೆ. ಪುತ್ತೂರಿಗೆ ಉದ್ಯಮದ ಅವಶ್ಯಕತೆ ಇದೆ. ಇದರಿಂದ ಹಲವರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ನವರಾತ್ರಿಯ ಸಮಯದಲ್ಲಿ ಒಂದು ಕಟ್ಟಡ ಕಟ್ಟಿದ್ದೀರಿ ಮುಂದೆ ಪುತ್ತೂರಿನಲ್ಲಿ ಒಳ್ಳೆಯ ಉದ್ಯಮಿಗಳಾಗಿ. ನನ್ನ ಸಹಕಾರ ಯಾವತ್ತೂ ಇದೆ ಎಂದು ಹೇಳಿ ಹಾರೈಸಿದರು.
ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಿದ್ದಾರೆ-ಸಂಜೀವ ಮಠಂದೂರು
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಾಣಿಜ್ಯ ಸಂಕೀರ್ಣದ ಮಾಲಕರಾದ ಮೂವರೂ ಸಹೋದರರು ಸಂಕೀರ್ಣಕ್ಕೆ ತಾಯಿಯ ಹೆಸರನ್ನು ಇಡುವ ಮೂಲಕ ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಆದರ್ಶರಾಗಿದ್ದಾರೆ. ಈ ಕಟ್ಟಡ ಪುತ್ತೂರಿಗೆ ಮುಕುಟಪ್ರಾಯವಾಗಿ ಶೋಭೆ ತಂದಿದೆ. ಪುತ್ತೂರು ಜಿಲ್ಲೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಟ್ಟಡಗಳ ಕೊಡುಗೆ ನೀಡಿದ ಇವರು ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿ ಶುಭಹಾರೈಸಿದರು.
ಶ್ರದ್ದೆಯಿಂದ ಮಾಡಿದ ಕೆಲಸಕ್ಕೆ ಭಗವಂತನ ಅನುಗ್ರಹ ಇದೆ-ಕಿಶೋರ್ ಕುಮಾರ್
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಮಾತನಾಡಿ, ತಂದೆಯವರ ಆಶೀರ್ವಾದದಿಂದ ಮೂವರೂ ಸಹೋದರರು ಒಳ್ಳೆಯ ಕಟ್ಟಡ ನಿರ್ಮಿಸಿದ್ದಾರೆ. ಶ್ರೀಮಹಾಲಿಂಗೇಶ್ವರ ದೇವರ ಅನುಗ್ರಹ ಸದಾ ಇರಲಿ. ಶ್ರದ್ದೆಯಿಂದ ಮಾಡಿದ ಕೆಲಸಕ್ಕೆ ಭಗವಂತನ ಅನುಗ್ರಹ ಇರುತ್ತದೆ. ಧರ್ಮ ಗೆದ್ದು ಅಧರ್ಮ ನಾಶವಾದ ದಿನ. ಆದುದರಿಂದ ಉತ್ತಮ ದಿನವಾದ ಇಂದು ಆರಂಭ ಮಾಡಿದ ಕೆಲಸ ಯಶಸ್ವಿಯಾಗಲಿ ಎಂದರು.
ತಾಯಿಯ ಆಶಯವನ್ನು ಇಡೀ ಕುಟುಂಬ ಈಡೇರಿಸಿದೆ-ದಯಾನಂದ ಶೆಟ್ಟಿ ಉಜಿರೆಮಾರ್
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಮಾತನಾಡಿ, ಅತ್ಯಂತ ಸುಂದರವಾದ ವಾಣಿಜ್ಯ ಸಂಕೀರ್ಣ ಕಟ್ಟಿ ಬೆಳೆಯುತ್ತಿರುವ ಪುತ್ತೂರಿಗೆ ಸೌಂದರ್ಯವನ್ನು ಕೊಟ್ಟಿದ್ದಾರೆ. ತಾಯಿಯ ಆಶಯವನ್ನು ಇಡೀ ಕುಟುಂಬ ಈಡೇರಿಸಿದೆ. ನಮ್ಮ ಯುವಕರು ದೊಡ್ಡ ಕಾರ್ಯಕ್ಕೆ ಕೈಹಾಕುವಾಗ ನಾವೆಲ್ಲರೂ ಅವರಿಗೆ ಸಹಕಾರ ಕೊಡಬೇಕು. ಮುಂದೆ ಅವರು ಉದ್ಯಮಿಗಳಾಗಿ ಬೆಳೆಯಬೇಕು. ಒಳ್ಳೆಯ ಸ್ವಾರ್ಥವನ್ನು ಸಮಾಜಕ್ಕೆ ಸಮರ್ಪಿಸಿದಾಗ ಎಲ್ಲರೂ ಒಳ್ಳೆಯದಾಗುತ್ತಾರೆ ಎಂದು ಹೇಳಿ ಶುಭಹಾರೈಸಿದರು.
ಉತ್ತಮವಾದ ಕೊಡುಗೆಯನ್ನು ಪುತ್ತೂರಿಗೆ ನೀಡಿದ್ದಾರೆ-ಶಿವಕುಮಾರ್ ಕಲ್ಲಿಮಾರ್
ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಮಾತನಾಡಿ, ಪುಷ್ಪಸ್ಕ್ವೇರ್ ಮೂಲಕ ಉತ್ತಮವಾದ ಕೊಡುಗೆಯನ್ನು ಪುತ್ತೂರಿಗೆ ನೀಡಿದ್ದಾರೆ. ಮುಂದೆಯೂ ಇನ್ನಷ್ಟು ಸುಂದರ ಕಟ್ಟಡ ಪುತ್ತೂರಲ್ಲಿ ನಿರ್ಮಾಣ ಮಾಡುವ ಹಾಗೆ ಶ್ರೀಮಹಾಲಿಂಗೇಶ್ವರ ದೇವರು ಆಶೀರ್ವಾದ ನೀಡಲಿ ಎಂದು ಹಾರೈಸಿದರು.
ಸರಳ ಸಜ್ಜನಿಕೆಯ ಸಹೋದರರ ಉದ್ಯಮ ಬೆಳೆಯಲಿ-ಸಹಜ್ ರೈ ಬಳೆಜ್ಜ
ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ್ ರೈ ಬಳೆಜ್ಜ ಮಾತನಾಡಿ, ಸುಮಾರು ವರ್ಷಗಳ ಹಿಂದೆ ಇದೇ ಜಾಗವನ್ನು ನಾನೂ ನೋಡಿದ್ದೆ. ಇಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಲು ಕಷ್ಟವಾಗಬಹುದು ಎಂದು ಯೋಜನೆ ಕೈಬಿಟ್ಟಿದ್ದೆ. ಆದರೆ ಈ ಸಹೋದರರು ಇದೇ ಜಾಗದಲ್ಲಿ ಒಳ್ಳೆಯ ಕಟ್ಟಡ ಕಟ್ಟಿ ತೋರಿಸಿದ್ದಾರೆ. ಅವರ ತಾಯಿಯನ್ನು ನೆನಪು ಮಾಡುವ ಕಾರ್ಯವಾಗಿ ಕಟ್ಟಡಕ್ಕೆ ತಾಯಿಯ ಹಸರು ಇಟ್ಟಿದ್ದಾರೆ. ಮಂಗಳೂರು ಬಿಟ್ಟರೆ ಬೆಳೆಯುತ್ತಿರುವ ಎರಡನೇ ನಗರ ಪುತ್ತೂರಿಗೆ ಇಂತಹ ಕಟ್ಟಡದ ಅವಶ್ಯಕತೆ ಇದೆ. ಸರಳ ಸಜ್ಜನಿಕೆಯ ಸಹೋದರರಾದ ಇವರ ಉದ್ಯಮ ಬೆಳೆಯಲಿ ಎಂದರು.
ವಿಜಯದಶಮಿ ದಿನ ಕಟ್ಟಡ ಲೋಕಾರ್ಪಣೆ ಮಾಡಿದ್ದಾರೆ-ಅರುಣ್ ಕುಮಾರ್ ಪುತ್ತಿಲ
ಪುತ್ತಿಲ ಪರಿವಾರ್ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ವಿಜಯದಶಮಿ ದಿನ ಪುತ್ತೂರಿಗೆ ಅವಶ್ಯಕತೆ ಇರುವ ಕಟ್ಟಡ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ ಪರಿಣಾಮ ಇಂತಹ ಕಟ್ಟಡ ಕಟ್ಟಲು ಸಾಧ್ಯವಾಗಿದೆ. ಮುಂದೆಯೂ ಇಂತಹ ಕಟ್ಟಡ ಪುತ್ತೂರಿಗೆ ಕೊಡುವಂತೆ ಶ್ರೀಮಹಾಲಿಂಗೇಶ್ವರ ದೇವರು ಆಶೀರ್ವಾದ ನೀಡಲಿ ಎಂದರು.
ಹಲವು ಸವಾಲುಗಳನ್ನು ಮೆಟ್ಟಿ ಭವ್ಯ ಕಟ್ಟಡ ನಿರ್ಮಾಣವಾಗಿದೆ-ಉಮೇಶ್ ನಾಯಕ್
ಪುತ್ತೂರು ಕ.ಸಾ.ಪ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ ನವರಾತ್ರಿಯ ಪರ್ವಕಾಲದಲ್ಲಿ ವಾಣಿಜ್ಯ ಸಂಕೀರ್ಣ ಶುಭಾರಂಭಗೊಂಡಿದೆ. ತ್ರಿಮೂರ್ತಿಗಳಾದ ಸಹೋದರರು ತಾಯಿಯನ್ನು ಹಚ್ಚಿಕೊಂಡಿದ್ದವರು. ಇದು ಭಾವನಾತ್ಮಕವಾದ ಉದ್ಘಾಟನಾ ಕಾರ್ಯಕ್ರಮವಾಗಿದೆ. ಹಲವು ಸವಾಲುಗಳನ್ನು ಮೆಟ್ಟಿ ಭವ್ಯ ಕಟ್ಟಡ ತಲೆ ಎತ್ತಿದೆ ಎಂದು ಹೇಳಿ ಪುತ್ತೂರಿಗೆ ಅವರದ್ದೇ ಆದ ಕೊಡುಗೆಗಳು ಬರಲಿ ಎಂದರು.
ಸಹೋದರರಿಂದ ಮುಂದೆಯೂ ಇಂತಹ ನಿರ್ಮಾಣಗಳು ಬರಲಿ-ಡಾ.ಹರಿಕೃಷ್ಣ ಪಾಣಾಜೆ
ಪರ್ಲಡ್ಕ ಎಸ್ಡಿಪಿ ರೆಮಿಡೀಸ್ ಮಾಲಕ ಡಾ.ಹರಿಕೃಷ್ಣ ಪಾಣಾಜೆ ಮಾತನಾಡಿ ಸಣ್ಣ ಪ್ರದೇಶದಲ್ಲಿ ಉತ್ತಮವಾದ ಕಟ್ಟಡ ಕಟ್ಟಿದ್ದಾರೆ. ಇದರಲ್ಲಿ ಒಳ್ಳೆಯ ಚಿಂತನೆ, ಮುಂದಾಲೋಚನೆ ಇದೆ. ಸಹೋದರರು ಒಗ್ಗಟ್ಟಾಗಿ ಉದ್ಯಮಕ್ಕೆ ಕೈಹಾಕಿದ್ದಾರೆ. ಮುದೆಯೂ ಇಂತಹ ನಿರ್ಮಾಣಗಳು ಮೂಡಿಬರಲಿ ಎಂದರು.
ಪುತ್ತೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ-ಕುಸುಮರಾಜ್
ಪುತ್ತೂರು ರೋಟರಿ ಯುವ ಅಧ್ಯಕ್ಷ ಕುಸುಮರಾಜ್ ಮಾತನಾಡಿ ಪುತ್ತೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಕುಟುಂಬದೊಂದಿಗೆ ಸುಮಾರು ಏಳೆಂಟು ವರ್ಷದಿಂದ ಉತ್ತಮ ಸಂಬಂಧ ಹೊಂದಿದ್ದೇನೆ. ಇವರಿಂದ ಇನ್ನೂ ಸಮಾಜ ಸೇವೆ ನಡೆಯುತ್ತಿರಲಿ ಎಂದು ಹಾರೈಸಿದರು.
ವಾಣಿಜ್ಯ ಸಂಕೀರ್ಣದ ಪಾಲುದಾರ ಅಭಿಜಿತ್ ಕೊಳಕೆಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ 10 ವರ್ಷಗಳ ಹಿಂದೆ ಸಪ್ತಗಿರಿ ಗ್ರೂಪ್ಸ್ ಆರಂಭಗೊಂಡಿದೆ. ನಮ್ಮ ತಾಯಿಯವರು ಮೂವರು ಸಹೋದರರಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಲು ಪ್ರೇರಪಣೆ ನೀಡಿದವರು. 4 ವರ್ಷದ ಹಿಂದೆ ನಿಧನರಾದ ತಾಯಿಯ ನೆನಪಿಗೋಸ್ಕರ ವಾಣಿಜ್ಯ ಸಂಕೀರ್ಣಕ್ಕೆ ಪುಷ್ಪಾ ಸ್ಕ್ವೇರ್ ಎಂಬ ಹೆಸರು ಇಟ್ಟಿದ್ದೇವೆ ಎಂದು ಹೇಳಿದರು.

ಕುಮಾರಿ ನಿಧಿ ಪ್ರಾರ್ಥಿಸಿ ಪಾಲುದಾರ ಅಭೀಷ್ ಕೊಳಕೆಮಾರ್ ವಂದಿಸಿದರು. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಸಿಝ್ಲರ್ ಗ್ರೂಫ್ನ ಪ್ರಸನ್ನ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಸತೀಶ್ ನಾಕ್, ಹಿಂದೂ ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಪರಿವಾರ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್, ಕಾಂಗ್ರೆಸ್ ಮುಖಂಡ ರೋಷನ್ ರೈ ಬನ್ನೂರು ಹಾಗೂ ಗಣ್ಯರು, ಪಾಲುದಾರರ ಕುಟುಂಬಸ್ಥರು ಉಪಸ್ಥಿತರಿದ್ದರು.