ಪುತ್ತೂರು: ಫೊಟೋಗ್ರಫಿ, ವೀಡಿಯೋಗ್ರಫಿ ಮತ್ತು ಎಡಿಟಿಂಗ್ ಸ್ಟುಡಿಯೋ ʼಸ್ಟೋರಿ ಬೈ ಧನುʼ ತೆಂಕಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪುಷ್ಪಾ ಸ್ಕ್ವೇರ್ನಲ್ಲಿ ಅ.2ರಂದು ಶುಭಾರಂಭಗೊಂಡಿತು.
ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಿಬ್ಬನ್ ಕತ್ತರಿಸಿ ಸ್ಟುಡಿಯೋ ಉದ್ಘಾಟಿಸಿದರು. ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ್ ರೈ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ನ ಸೀತಾರಾಮ ರೈ ಕೆದಂಬಾಡಿಗುತ್ತು, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಪುತ್ತೂರು ವಲಯದ ಅಧ್ಯಕ್ಷ ಜಯಂತ ಗೌಡ ಕರ್ಕುಂಜ, ಪುಷ್ಪ ಸ್ಕ್ವೇರ್ ಮಾಲಕ ಅಭಿಜಿತ್ ನಾಕ್, ಹಿಂದೂ ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಹಲವು ಗಣ್ಯರು ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಧನುಷ್ ಮತ್ತು ನಾಗೇಂದ್ರ ರೈ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.