ನೆಲ್ಯಾಡಿ: ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ, ರಿಕ್ಷಾ ಚಾಲಕ ಪ್ರಿನ್ಸ್ (38ವ.)ರವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಅ.3ರಂದು ನಿಧನರಾಗಿದ್ದಾರೆ.
ಪ್ರಿನ್ಸ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ. ಪ್ರಿನ್ಸ್ ಅವರು ಸುಮಾರು 15 ವರ್ಷಗಳಿಂದ ಗೋಳಿತ್ತೊಟ್ಟಿನಲ್ಲಿ ರಿಕ್ಷಾ ನಿಲ್ಲಿಸಿ ಬಾಡಿಗೆಗೆ ಓಡಾಟ ನಡೆಸುತ್ತಿದ್ದರು. ಇವರು ಮೂರು ತಿಂಗಳ ಹಿಂದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಗೋಳಿತ್ತೊಟ್ಟಿನ ರಿಕ್ಷಾ ಚಾಲಕರು ಸುಮಾರು 34 ಸಾವಿರ ರೂ.ಸಂಗ್ರಹಿಸಿ ನೀಡಿದ್ದರು. ಮೃತರು ತಂದೆ ಪಾಪಚ್ಚನ್ ಅವರನ್ನು ಅಗಲಿದ್ದಾರೆ.