Poornachandra Tejaswi (ಕೆ. ಪಿ. ಪೂರ್ಣಚಂದ್ರ ತೇಜಸ್ವಿ) ಹಾಸ್ಯದ ಬರವಣಿಗೆಯಲ್ಲಿ ಗಂಭೀರತೆಯ ಪ್ರಸ್ತಾಪ ಮಾಡಿ ಓದುಗರಲ್ಲಿ ಒಂದು ತೆರನಾದ ಆಲೋಚನಾ ಶಕ್ತಿಯನ್ನು ಹೆಚ್ಚಿಸಿದ ಹೊಸ ಭಾಷ್ಯಾಂತರದ ಲೇಖಕ, ಕಾದಂಬರಿಕಾರ, ಛಾಯಾಗ್ರಾಹಣ, ಸಹಜ ಕೃಷಿ, ಬೇಟೆ, ವೈಜ್ಞಾನಿಕ ಬರಹಗಳಲ್ಲಿ ಪಳಗಿದ ಸಾಧಾರಣ ವ್ಯಕ್ತಿತ್ವದ ಮೇಧಾವಿ…
ಇವರ ಕೈಯಲ್ಲಿ ಮೂಡಿದ ಅಷ್ಟೂ ಬರಹಗಳು ಪ್ರಸಿದ್ಧವೇ. ಅದರಲ್ಲಿ ನಾನೊಂದನ್ನು ಹೆಕ್ಕಿ ನಿಮಗೆ ಪರಿಚಯಿಸಬೇಕೆಂದು ಹೇಳ ಹೊರಟಿರುವುದು ʼಚಿದಂಬರ ರಹಸ್ಯʼ ಎನ್ನುವ ಜನಪ್ರಿಯ ಕಾದಂಬರಿ. ಚಿದಂಬರ ರಹಸ್ಯ ಹೆಸರಿನಲ್ಲಿಯೇ ಉಲ್ಲೇಖಿಸಿದಂತೆ ಒಂದು ರಹಸ್ಯವನ್ನು ಹುಡುಕಲು ಹೋಗಿ ಅನೇಕ ರಹಸ್ಯಗಳ ಅನುಭವ, ಮಾಹಿತಿಯ ಸಾರ ಓದುಗನಿಗೆ ಸಿಗುವಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಈ ಕಾದಂಬರಿಯಲ್ಲಿ ಯಶಸ್ವಿಯಾಗಿದ್ದಾರೆ.
1985ರಲ್ಲಿ ಪ್ರಕಟವಾದ ತೇಜಸ್ವಿಯವರ ’ಚಿದಂಬರ ರಹಸ್ಯ’ ಮತ್ತೊಂದು ಜನಪ್ರಿಯ ಕಾದಂಬರಿ. ಈ ಕಾದಂಬರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1987, 1988) ದೊರೆತಿವೆ.ಆರು ಮುದ್ರಣಗಳನ್ನು ಕಂಡಿದ್ದು ಮರಾಠಿ, ತಮಿಳು, ಪಂಜಾಬಿ, ತೆಲುಗು ಭಾಷೆಗಳಿಗೂ ಅನುವಾದವಾಗಿದೆ.ಕೊಲೆ ತನಿಖೆ, ಜಾತಿ ವ್ಯವಸ್ಥೆ, ಕೋಮುಗಲಭೆ, ಕುರುಡು ನಂಬಿಕೆಗಳು, ಪ್ರೇಮಕಥೆ, ಏಲಕ್ಕಿ ಗಿಡಗಳು, ಸ್ನೇಹ, ಯುವ ಬಂಡಾಯಗಾರರು, ಜಮೀನ್ದಾರರು, ಅಸ್ಪೃಶ್ಯರು, ಹಳ್ಳಿಯ ರಾಜಕೀಯ ಸಾರಾಂಶವನ್ನು ಸಾರುವ ಕಾದಂಬರಿಯಾಗಿದೆ.
ಓದುಗನನ್ನು ಹಳ್ಳಿಯ ಸೊಗಡಿನ ಭಾಷೆಯಾಗಲಿ, ಅವರಲ್ಲಿರುವ ಮುಗ್ದತೆಯನ್ನು, ಅವರ ತಲೆಯನ್ನು ಹಾಳುಗೆಡವುವ ಕೆಲ ರಾಜಕೀಯ ವ್ಯಕ್ತಿಗಳ ಕುರಿತಾದ ಚಿಂತನೆಗನ್ನು ಜಾಗೃತಗೊಳಿಸುತ್ತದೆ. ಈ ಕಾದಂಬರಿ ಅಧ್ಯಾಯಗಳಲ್ಲಿದ್ದು, ಪ್ರತಿಯೊಂದು ಅಧ್ಯಾಯವು ಭಾಷಾ ಹಾಸ್ಯದಿಂದ ಕೂಡಿದ್ದು, ಎಲ್ಲಿಯೂ ಆಲಸ್ಯ ಹಿಡಿಯಲು ಸಾಧ್ಯವೇ ಇಲ್ಲ ಎಂಬಂತೆ ಮೂಡಿ ಬಂದಿದೆ.
ಈ ಮೇಲಿರುವ ಎಲ್ಲಾ ಪ್ರಸಂಗಗಳು ನೀವು ಪುಸ್ತಕ ಪಡೆದು ಓದಿ. ಅದನ್ನು ಮನಸ್ಸಿಗೆ ಕೊಟ್ಟು ನೋಡಿ ನಿಮಗೆ ಯಾವ ಚಿಂತನೆ ಬರಬಹುದು ಎಂದು ಮತ್ತೆ ಆಲೋಚಿಸಿ…
ಪುಸ್ತಕ ಪಡೆಯಲು ಈ ಕೆಳಗಿನ ಲಿಂಕ್ ಅದುಮಿ
https://shorturl.at/ifDKp