ಬಿಜೆಪಿಯ ಅಪಪ್ರಚಾರಕ್ಕೆ ಬಲಿಯಾಗಿ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದವರಿಗೆ ಸರಕಾರದ ಸವಲತ್ತು ನೀಡಬಾರದು – ಹೆಚ್ ಮಹಮ್ಮದ್ ಆಲಿ

0

ಪುತ್ತೂರು: ಬಿಜೆಪಿಯ ಒತ್ತಾಸೆಗೆ ಬೇಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡದವರ ಪಟ್ಟಿ ಮಾಡಿ ಮತ್ತು ಅವರಿಗೆ ಸರಕಾರದ ಸವಲತ್ತು ನೀಡಬಾರದು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.


ಇವತ್ತು ಕೇಂದ್ರ ಸರಕಾರ ಜಾತಿ ಗಣತಿ ಮಾಡಿದರೆ ಅದು ಬಿಜೆಪಿಯವರಿಗೆ ಸರಿ ಕಾಣುತ್ತದೆ. ಆದರೆ ರಾಜ್ಯ ಸರಕಾರದ ಮಾಡಿದರೆ ತಪ್ಪು ಕಾಣುತ್ತದೆ ಎಂದಾದರೆ ಬಿಜೆಪಿ ದ್ವಂದ್ವ ನಿಲುವು ಮಾಡುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಕಾಂತರಾಜು ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಿದೆ. ಅದನ್ನು ಮಂಡನೆ ಮಾಡುವಲ್ಲಿ ಬಿಜೆಪಿ ವಿರೋಧಿಸಿದರು. ಅದರ ಮೊದಲು ಬಿಜೆಪಿ ಸರಕಾರ ಇದ್ದಾಗಲೇ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಈ ಆಯೋಗವು ವರದಿ ಮಂಡಿಸಲು ಬೊಮ್ಮಾಯಿ ಸರಕಾರ ಆದೇಶ ಮಾಡಿತ್ತು. ಇವತ್ತು ಜಯಪ್ರಕಾಶ್ ಹೆಗ್ಡೆ ವರದಿಯನ್ನೂ ಕೂಡಾ ಸದನದಲ್ಲಿ ಅನುಷ್ಠಾನ ಮಾಡಲು ಬಿಜೆಪಿ ಬಿಡುತ್ತಿಲ್ಲ. ನಾನಾ ರೀತಿಯ ಕಾರಣ ನೀಡಿ ತಿರಸ್ಕರಿಸುವ ಕೆಲಸ ಮಾಡಿದಲ್ಲದೆ ಅಪಪ್ರಚಾರ ಮಾಡುವ ಕೆಲಸ ಮಾಡಿದರು. ಹಾಗಾಗಿ ಸಿದ್ದರಾಮಯ್ಯ ಸರಕಾರ ಹೊಸದಾಗಿ ಸಮೀಕ್ಷೆ ಮಾಡುವ ಕುರಿತು ತೀರ್ಮಾನಿಸಿದಾಗ ಅದನ್ನು ಬಿಜೆಪಿ ಒಪ್ಪಿ ಇವತ್ತು ಅಪಸ್ವರ ಎತ್ತುತ್ತಿದ್ದಾರೆ. ಈ ಸಮೀಕ್ಷೆ ಮಾಡದಂತೆ ಬಿಜೆಪಿ ಮತ್ತು ಮೇಲ್ಜಾತಿ ಯವರು ಹೈಕೋರ್ಟ್‌ಗೂ ಹೋದರು. ಜೊತೆಗೆ ಅಪಪ್ರಚಾರ ಮಾಡಿಕೊಂಡು ವೈಯುಕ್ತಿ ದಾಖಲೆ ಪಡೆಯಲಾಗುತ್ತದೆ ಎಂದು ಹೇಳುತ್ತಾ ಹೋದರು. ಆದರೆ ಇವತ್ತು ಸಮೀಕ್ಷೆ ಮಾಡದಿದ್ದರೂ ರೇಶನ್ ಕಾರ್ಡ್, ಆಧಾರ್ ಕಾರ್ಡ್‌ನಲ್ಲಿ ಎಲ್ಲಾ ದಾಖಲೆ ಕೇಂದ್ರ ಸರಕಾರಕ್ಕೆ ಸಿಗುತ್ತದೆ ಏಂಬುದು ಗೊತ್ತಿರಲಿ. ರಾಜಕೀಯ ಹಾಗೂ ಸಾಮಾಜಿಕವಾಗಿ ಯಾರಿಗೂ ನ್ಯಾಯ ಸಿಗಬಾರದು. ಅಸಮಾನತೆಯಿಂದಲೇ ಇವತ್ತು ಸಮಾಜ ಇರಬೇಕು ಎಂಬುದು ಬಿಜೆಪಿ ಮತ್ತು ಸಂಘ ಪರಿವಾರದ ಅಜೆಂಡ. ಇವರ ಅಪಪ್ರಚಾರದಿಂದಾಗಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅನೇಕ ಮಂದಿ ಮಾಹಿತಿ ಕೊಡಲು ನಿರಾಕರಣೆ ಮಾಡುತ್ತಿದ್ದಾರೆ. ಪುತ್ತೂರಿನಲ್ಲೂ ಮಾಹಿತಿ ನೀಡದ ಹಲವು ಘಟನೆಗಳು ನಡೆದಿದೆ. ಯಾರು ಸಮೀಕ್ಷೆಗೆ ಮಾಹಿತಿ ನೀಡುತ್ತಿಲ್ಲವೂ ಅವರಿಗೆ ಸರಕಾರಿ ಸವಲತ್ತು ಕೊಡಬಾರದು. ಗೃಹಲಕ್ಷ್ಮೀ, ಭಾಗ್ಯಲಕ್ಷ್ಮೀ ಯೋಜನೆ ಕೊಡಬಾರದು. ಬಿಜೆಪಿಯ ಒತ್ತಾಸೆ ಬೇಕಾಗಿ ಮಾಹಿತಿ ಕೊಡುವುದಿಲ್ಲ ಎಂದು ಹೇಳುವುದಾದರೆ ಅವರ ಪಟ್ಟಿ ಮಾಡಿ ಸವಲತ್ತು ನಿರಾಕರಣೆ ಮಾಡಬೇಕು. ಎಲ್ಲರ ಒಳಿತಿಗಾಗಿ ಮಾಡುವ ಕಾರ್ಯಕ್ರಮವನ್ನು ವಿರೋಧಿಸುವುದು ರಾಜದ್ರೋಹ ಎಂದು ಹೇಳಿದರು.


ಅಧಿಕಾರಿಗಳ ನಿರ್ಲಕ್ಷ್ಯ – ಜಿಲ್ಲಾ ಉಸ್ತುವಾರಿ ಸಚಿವರೇ ಮೋನಿಟರಿ ಮಾಡಲಿ
ನಿವೇಶನ ರಹಿತ, ಅಂಗವಿಕಲತೆ, ಕುಟುಂಬದ ವ್ಯವಸ್ಥೆ, ವಿದ್ಯಾಭ್ಯಾಸದ ಸ್ಥಿತಿಗತಿ, ನಿರುದ್ಯೋಗಿಗಳ ವಿಚಾರ, ಕುಡಿಯುವ ನೀರಿನ ಮೂಲ ಎಲ್ಲಾ ವಿವರ ಸಹಿತ ಸಮೀಕ್ಷೆಯಲ್ಲಿ 24 ವಿವರಣೆ ಕೇಳಲಾಗುತ್ತದೆ. ಕಷ್ಟದಲ್ಲಿರುವವರನ್ನು ಮೇಲೆತ್ತುವ ಕೆಲಸ ಈ ಸಮೀಕ್ಷೆ ಮೂಲಕ ಆಗುತ್ತದೆ. ಆದರೆ ಬಿಜೆಪಿಯಿಂದಾಗಿ ಸಮೀಕ್ಷೆಗೆ ಗೊಂದಲ ಉಂಟಾಗಿದೆ. ಪುತ್ತೂರಿನಲ್ಲಿ ಅಧಿಕಾರಿಗಳು ತುಂಬಾ ಗಂಭೀರವಾಗಿ ಪರಿಗಣಿಸಿಲ್ಲ. ಅವರಿಗೆ ಬಿಜೆಪಿ ಪ್ರಭಾವ ಇದೆಯೋ, ಅವರ ಒಲವು ಇದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸಮೀಕ್ಷೆ ಪ್ರಚಾರ ಆಗುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೆ ಇದನ್ನು ಮೊನಿಟರ್ ಮಾಡಬೇಕು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಮೀಕ್ಷೆ ಪಕ್ಕಾ ಆಗಬೇಕೆಂದು ಮಹಮ್ಮದ್ ಆಲಿ ಹೇಳಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಲಿಕುಂಞಿ ಕೊರಂಗಿಲ, ಯುವ ಕಾಂಗ್ರೆಸ್ ಮುಖಂಡ ಜಗದೀಶ್ ಕಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here