ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ವತಿಯಿಂದ ಅ.20ರಂದು ಪುತ್ತೂರು-ಕೊಂಬೆಟ್ಟುವಿನ ತಾಲೂಕು ಕ್ರೀಡಾಂಗಣದಲ್ಲಿ ದೀಪಾವಳಿಯ ಪ್ರಯುಕ್ತ ನಡೆಯಲಿರುವ ವಸ್ತ್ರ ವಿತರಣಾ ಮತ್ತು ಟ್ರಸ್ಟ್ ನ ಫಲಾನುಭವಿಗಳ ವಾರ್ಷಿಕ ಸಮಾವೇಶ “ಅಶೋಕ ಜನ-ಮನ 2025” ಕಾರ್ಯಕ್ರಮದ ಚಪ್ಪರ ಮೂಹೂರ್ತವು ಅ.05ರಂದು ಬೆಳಿಗ್ಗೆ ಗಂಟೆ 10:47ಕ್ಕೆ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ.
ಅ.05ರಂದು ಬೆಳಿಗ್ಗೆ 8.30ಕ್ಕೆ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನನದಲ್ಲಿ ಮತ್ತು ಬೆಳಿಗ್ಗೆ 9.30ಕ್ಕೆ ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಸ್ಠಾನದಲ್ಲಿ ಚಪ್ಪರ ಮೂಹೂರ್ತದ ಬಗ್ಗೆ ದೇವರಲ್ಲಿ ಪ್ರಾರ್ಥನೆ ನಡೆಯಲಿದೆ. ಎಲ್ಲರು ಭಾಗವಹಿಸುವಂತೆ ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಸುದೇಶ್ ಆರ್.ಶೆಟ್ಟಿ ಶಾಂತಿನಗರ, ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.