ಪುತ್ತೂರು: ಶ್ರೀ ವಿಷ್ಣು ಸೇವಾ ಮಹಿಳಾ ಬಳಗ ದರ್ಬೆತ್ತಡ್ಕ ಇದರ ಎರಡನೇ ವಾರ್ಷಿಕೋತ್ಸವವು ಸೆ.28ರಂದು ಶ್ರೀ ಮಣಿಕಂಠ ಸಭಾ ಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ ವಿಷ್ಣು ಸೇವಾ ಮಹಿಳಾ ಬಳಗದ ಅಧ್ಯಕ್ಷೆ ಪ್ರಮೋದಿನಿ ನವೀನ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಚಂದ್ರ ಪ್ರಭಾಗೌಡ ನೀರ್ಪಾಡಿ, ಹರಿಪ್ರಸಾದ್ ಶೆಟ್ಟಿ ಇಂತ್ರುಮೂಲೆ , ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಮಣಿಯಾಣಿ, ಕುಂಬ್ರ ಸಿ.ಎ ಬ್ಯಾಂಕ್ ನಿವೃತ್ತ ಕಾರ್ಯ ನಿರ್ವಾಹಣಾಧಿಕಾರಿ ರಾಜೀವಿ ರೈ ಕುಂಬ್ರ, ಕಾರ್ಯ ನಿರ್ವಾಹಣಾಧಿಕಾರಿ ಭವಾನಿ ಬಿ.ಆರ್ ಶಿವರಾಮ ಮಣಿಯಾಣಿ ಕುರಿಂಜ, ರವೀಂದ್ರ ಡಿ, ಪ್ರಶಾಂತ್ ಕೆ.ಬಿ, ಪುಷ್ಪರಾಜ್ ಕುಡ್ಚಿಲ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಸನ್ಮಾನ
ಕಾರ್ಯಕ್ರಮದಲ್ಲಿ ವೇಗದ ನಡಿಗೆಯಲ್ಲಿ 8 ಬಾರಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಆಂಧ್ರಪ್ರದೇಶದಲ್ಲಿ ನಡೆದ 10 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದ ಸ್ಥಳೀಯ ಪ್ರತಿಭೆ ಧನುಷಾ ಶೆಟ್ಟಿ ಮತ್ತು ಸ್ಥಳೀಯ ದರ್ಬೆತ್ತಡ್ಕ ಶಾಲೆಯಲ್ಲಿ ಅಕ್ಷರ ದಾಸೋಹದ ಮುಖ್ಯ ಅಡುಗೆಯವರಾಗಿ 23 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಮಾಲತಿ ಬೈರಮೂಲೆರನ್ನು ಸನ್ಮಾನಿಸಲಾಯಿತು.
ದಿಶಾ ಡಿ ಪ್ರಾರ್ಥಿಸಿ , ರಾಜೇಶ್ವರಿ ಸ್ವಾಗತಿಸಿ, ಸಿಂಚನ ಸುರುಳಿ ಕುಮೇರು ವಂದಿಸಿದರು. ಶ್ರೀನಿಕ ಪಾಂಡಿಯಡ್ಕ ಕಾರ್ಯಕ್ರಮ ನಿರೂಪಿಸಿದರು.