ವಾಸುದೇವ ಇಡ್ಯಾಡಿ ಇವರಿಗೆ ಶ್ರೀ ಆದಿಶಕ್ತಿ ಗೌರವ ರತ್ನ ಪ್ರಶಸ್ತಿ ಪ್ರದಾನ
ಸವಣೂರು: ಶ್ರೀ ಆದಿಶಕ್ತಿ ಭಜನಾ ಮಂಡಳಿ (ರಿ.) ಪೆರಿಯಡ್ಕ ಹಾಗೂ ಶ್ರೀ ಆದಿಶಕ್ತಿ ಉತ್ಸವ ಸಮಿತಿ ಪೆರಿಯಡ್ಕ ಇದರ ವತಿಯಿಂದ ನಡೆದ 7ನೇ ವರ್ಷದ ಲೆವೆಲ್ ಮಾದರಿಯ ಪುರುಷರ ಹಾಗೂ ಮಹಿಳೆಯರ ವಿಭಾಗದ ಮುಕ್ತ ಹಗ್ಗಜಗ್ಗಾಟ ಪಂದ್ಯಾಟ ಸವಣೂರು ಪೆರಿಯಡ್ಕ ಬಸ್ ತಂಗುದಾಣದ ಬಳಿ ನಡೆಯಿತು.

ಹಗ್ಗಜಗ್ಗಾಟ ಕ್ರೀಡಾಕೂಟವನ್ನು ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ಸೂಡಿಮುಳ್ಳು ತೆಂಗಿನಕಾಯಿ ಒಡೆಯುವುದರ ಮುಖಾಂತರ ಪಂದ್ಯಾಟಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.
ದೋಸೆ ಹಬ್ಬದ ಕೌಂಟರ್ ಅನ್ನು ಅತಿಥಿಗಳಾದ ಪುತ್ತೂರಿನ ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಬೆಂಗಳೂರಿನ ಉದ್ಯಮಿಗಳಾದ ಯತೀಶ್ ಕಾನಾವುಜಾಲು, ಪುರುಷೋತ್ತಮ ಅನಿಲ ಬೆಂಗಳೂರು ಅವರು ದೋಸೆ ಹೊಯ್ಯುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಲವು ಬಗೆಯ ದೋಸೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಲೈವ್ ಕೌಂಟರ್ ನಲ್ಲಿ ವಿತರಿಸಲಾಯಿತು. ಸುಮಾರು 2 ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಈ ಉಚಿತವಾದ ದೋಸೆಯನ್ನು ಸವಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಭಜನಾ ಮಂಡಳಿಯು ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೇ, ಸಮಾಜಮುಖಿ ಕಾರ್ಯ ಮಾಡುತ್ತಾ ಈ ಹಗ್ಗಜಗ್ಗಾಟ ಪಂದ್ಯಾಟ ಮುಖಾಂತರ ಯುವ ಜನತೆಯನ್ನು ಒಗ್ಗೂಟಿಸುವಲ್ಲಿ ಯಶಸ್ವಿಯಾಗಿದೆ, ಅದರ ಜೊತೆಗೆ ಬಂದಿರುವ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಹಲವು ಬಗೆಯ ದೋಸೆಗಳನ್ನು ಉಣಬಡಿಸಿರುವುದು ದಾಖಲೆಯೇ ಸರಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾಗಿ ಹಲವು ವರ್ಷಗಳಿಂದ ಸಾವಿರಾರು ಮಂದಿಗೆ ಉಚಿತವಾಗಿ ಔಷಧ ನೀಡುತ್ತಾ ಬಂದಿರುವಂತಹ ವಾಸುದೇವ ಇಡ್ಯಾಡಿ ಇವರಿಗೆ ಶ್ರೀ ಆದಿಶಕ್ತಿ ಗೌರವ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾಮ ಪಂಚಾಯತ್ ನ ಸದಸ್ಯರಾದ ಗಿರಿಶಂಕರ ಸುಲಾಯ, ಪುತ್ತೂರು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರು ದಿನೇಶ್ ಮೆದು, ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ತಾರನಾಥ ಕಾಯರ್ಗ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು ಇದರ ಅಧ್ಯಕ್ಷ ಮಹೇಶ್ ಕೆ ಸವಣೂರು, ಸವಣೂರು, ಸಿ.ಎ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ., ಸವಣೂರು ಸಿ.ಎ. ಬ್ಯಾಂಕಿನ ನಿರ್ದೇಶಕರಾದ ಚೆನ್ನಪ್ಪ ಗೌಡ ನೂಜಿ, ಪ್ರೇಮಾ ಎಲೆಕ್ಟ್ರಿಕಲ್ಸ್ ಮಾಲಕರಾದ ಜಯರಾಮ ಸವಣೂರು , ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸವಣೂರು ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ನಡುಬೈಲು, ಸವಣೂರು ಮೆಸ್ಕಾಂ ಜೆ.ಇ. ರಾಜೇಶ್ ನಾಯ್ಕ್, ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಭಜನಾ ಮಂಡಳಿಯ ಗೌರವಾಧ್ಯಕ್ಷ ರಾಜರಾಮ ಪ್ರಭು, ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಕುದ್ಮನಮಜಲು, ರಾಜ್ಯ ಬಿಜೆಪಿ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ, ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಗೌಡ ಇಡ್ಯಾಡಿ ಕಾರ್ಯದರ್ಶಿ ಕಮಲಾಕ್ಷ ಪೆರಿಯಡ್ಕ, ಉತ್ಸವ ಸಮಿತಿ ಅಧ್ಯಕ್ಷ ಯತೀಶ್ ಪೂವ ಕಾರ್ಯದರ್ಶಿ ಪ್ರವೀಣ್ ಪೆರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರ ಮಟ್ಟದ ನಿರೂಪಕರಾದ ದಿವಾಕರ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ದಯಾನಂದ ಮೆದು, ಮತ್ತು ನಂದನ್ ಮಂಗಳೂರು ಸಹಕರಿಸಿದರು. ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಶ್ರೀ ಉಳ್ಳಾಲ್ತಿ ಬಲ್ನಾಡು ಹಾಗೂ ದ್ವಿತೀಯ ಷಣ್ಮುಖ ಬಳಗ ಆರ್ಲಪದವು,ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಜನನಿ ಕಡಬ ದ್ವಿತೀಯ ನ್ಯೂ ಫ್ರೆಂಡ್ಸ್ ಬೊಮ್ಮಾರು ಹಾಗೂ ತೃತೀಯ ಶಿವಾಜಿ ಪ್ರೆಂಡ್ಸ್ ದುಗ್ಗಲಡ್ಕ ವಿಜೇತರಾದರು.