ಪುತ್ತೂರು; ಕೆದಂಬಾಡಿ ಗ್ರಾಮದ ಮುಂಡಾಲ ನಿವಾಸಿ ಬಜದ ಗುತ್ತು ಶೀನಪ್ಪ ಶೆಟ್ಟಿ (65 ವ) ಅಲ್ಪ ಕಾಲದ ಅನಾರೋಗ್ಯದಿಂದ ಅ.1 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರ ಪತ್ನಿ ವಸಂತಿ ಶೆಟ್ಟಿ ಮುಂಡಾಲ ಗುತ್ತು, ಪುತ್ರಿ ತೃಪ್ತಿ ರತನ್ ರೈ ಕುಂಬ್ರ ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಬಂದು ಮಿತ್ರರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮೃತರ ಉತ್ತರ ಕ್ರಿಯಾಧಿ ಕಾರ್ಯಕ್ರಮ ಅ.11 ರಂದು ಪರ್ಪುಂಜ ಶಿವಕೃಪಾ ಆಡಿಟೋರಿಯಂನಲ್ಲಿ ನಡೆಯಲಿದೆ.