ಪುತ್ತೂರು: ಭವಿಷ್ಯವನ್ನರಸಿ ವಿದೇಶದಲ್ಲಿ ಉನ್ನತ ವ್ಯಾಸಂಗದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ವಿಸ್ಡಂ ಎಜುಕೇಶನ್ ಸಂಸ್ಥೆಯ ಪುತ್ತೂರು ಶಾಖೆ ವತಿಯಿಂದ INTERNX ಕ್ಕೆ ABROAD STUDIES ಬಗ್ಗೆ ಮಾಹಿತಿ ಕಾರ್ಯಾಗಾರ ಅ.3ರಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ವಿವಿಧ ವಿಭಾಗದ ಸುಮಾರು 240 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ವಿದೇಶದಲ್ಲಿ ವ್ಯಾಸಂಗ ಮಾಡುವ ಕುರಿತು ಮಾಹಿತಿ ಪಡೆದುಕೊಂಡರು.
ವಿಸ್ಡಂ ಎಜುಕೇಸನ್ ಸಂಸ್ಥೆಯ ಪುತ್ತೂರು ಶಾಖೆಯ ಪಾಲುದಾರ ದೀಪಕ್ ಬೋಳೂರು, ದಕ್ಷಿಣ ಕನ್ನಡ ಜಿಲ್ಲಾ ಮುಖ್ಯಸ್ಥ ದಿರೇನ್ ಕುಂದರ್, ಪುತ್ತೂರು ಶಾಖೆಯ ಮುಖ್ಯಸ್ಥೆ ರೂಪರೇಖಾ ಆಳ್ವ, IQAL ಸಂಯೋಜಕ ಡಾ. ಹರಿಪ್ರಸಾದ್ ಎಸ್, ಪ್ಲೇಸ್ಮೆಂಟ್ ಸೆಲ್ ನ ಸಂಯೋಜಕರಾದ ನವೇರಿಯಾ ಬಾನು, ಡಾ. ನಂದೇಶ್ ವೈ.ಡಿ., ಕಾರ್ಯಕ್ರಮ ಸಂಯೋಜಕಿ ಪೂಜಾ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಸ್ಡಂ ಎಜುಕೇಶನಲ್ ಸಂಸ್ಥೆಯ ಸಂಸ್ಥಾಪಕಿ, ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಪ್ರಾನ್ಸಿಸ್ಕ್ ತೇಜ್, ಸಹ ಸಂಸ್ಥಾಪಕ ಡಾ. ಗುರುತೇಜ್ ನೇತೃತ್ವದಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ಕೆರಿಯರ್ ಕೌನ್ಸಿಲಿಂಗ್, ಸ್ಕಾಲರ್ ಶಿಪ್ ಪಾಸಿಬಲಿಟಿ ಗೈಡೆನ್ಸ್, ಡಾಕ್ಯುಮೆಂಟೇಶನ್, ಟೆಸ್ಟ್ ಪ್ರಿಪರೇಶನ್ ಟ್ರೈನಿಂಗ್, IELTS ಟ್ರೈನಿಂಗ್ ನೀಡುವ ಮೂಲಕ ಕಳೆದ ಹಲವು ವರ್ಷಗಳಿಂದ ಮಣಿಪಾಲ, ಶಿವಮೊಗ್ಗ, ಹಾಸನ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಹುಬ್ಬಳ್ಳಿ, ಅರಸೀಕೆರೆ, ಮೈಸೂರಿನಲ್ಲಿ ಕಾರ್ಯಾಚರಿಸುತ್ತಿದ್ದು ದೇಶ-ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.