





ಪುತ್ತೂರು: ಶೃಂಗೇರಿ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮಿಗಳ ಆಶಯದಂತೆ ಧರ್ಮ ಶಿಕ್ಷಣವನ್ನು ನೀಡುವ ಸಲುವಾಗಿ ‘ಧರ್ಮಾಭ್ಯುದಯ’ ಧರ್ಮ ಶಿಕ್ಷಣ ಸಮಿತಿ ಈಶ್ವರಮಂಗಲ ಇದರ ನೇತೃತ್ವದಲ್ಲಿ ಶರನ್ನವರಾತ್ರಿಯ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಧರ್ಮಶಿಕ್ಷಣ ಭಜನಾ ಕೀರ್ತನೆಯೊಂದಿಗೆ ಪ್ರಾರಂಭಗೊಂಡಿತು.



ಸಮಿತಿಯ ಗೌರವಾಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ರೈ ಮೇನಾಲ, ಉಪಾಧ್ಯಕ್ಷ ಪ್ರವೀಣ್ ರೈ ಮೇನಾಲ, ಪ್ರಧಾನ ಕಾರ್ಯದರ್ಶಿ ನವೀನ್ ಗೌಡ ಕುಕ್ಕುಡೇಲು ಎಸ್ಟೇಟ್, ಕಾರ್ಯದರ್ಶಿ ಪ್ರವೀಣ್ ನೀರಳಿಕೆ, ಖಜಾಂಚಿ ರವೀಂದ್ರ ಮಾಣಿಲತ್ತಾಯ, ರಮಾನಂದ ಕೋರಿಗದ್ದೆ, ಶಿಕ್ಷಕಿರಾದ ತೇಜಸ್ವಿನಿ ನವೀನ್, ಮೀನಾಕ್ಷಿ ಭಾಸ್ಕರ ಮತ್ತು ಸಮಿತಿಯ ಎಲ್ಲಾ ಸದಸ್ಯರುಗಳು ಹಾಗೂ ಪಂಚಲಿಂಗೇಶ್ವರ ಭಜನಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಊರಿನ ಹಿರಿಯರು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.






ಪೂಜೆಯನ್ನು ನಡೆಸಿಕೊಡುವಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ರವೀಂದ್ರ ಮಣಿಲತ್ತಾಯ ಹಾಗೂ ಸಂದೀಪ ಕಾರಂತರು ಸಹಕರಿಸಿದರು. ಬಳಿಕ ಉಡುಪಿ ಸಾಲಿಗ್ರಾಮ ಡಿವೈನ್ ಪಾರ್ಕ್ ನ ಪ್ರಶಿಕ್ಷಕರಿಂದ ಸತ್ಸಂಗ ಕಾರ್ಯಕ್ರಮ ನಡೆಯಿತು.
ಶೃಂಗೇರಿ ಪೀಠದ ಆದೇಶದಂತೆ ಪ್ರತಿ ಭಾನುವಾರ ಬೆಳಿಗ್ಗೆ 9 ರಿಂದ 11ರ ತನಕ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಹಂತದ ಮಕ್ಕಳಿಗೆ ಉಚಿತವಾಗಿ ಧರ್ಮ ಶಿಕ್ಷಣ ನೀಡಲಾಗುವುದೆಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.










