ಮುಕ್ಕೂರು: ಸುಳ್ಯ ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪಂಚಸಪ್ತತಿ-2025 ಎಪ್ಪತ್ತೈದು ದಿನಗಳ ಸ್ವಚ್ಚತಾ ಅಭಿಯಾನಕ್ಕೆ ಮುಕ್ಕೂರು ನೇಸರ ಯುವಕ ಮಂಡಲದ ಸಹಭಾಗಿತ್ವದಲ್ಲಿ ಅ.10 ರಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಚಾಲನೆ ನೀಡಲಾಯಿತು.
ಅ.10 ರಿಂದ ಡಿಸೆಂಬರ್ 25 ರ ತನಕ ಒಟ್ಟು 75 ದಿನಗಳ ಕಾಲ ನಡೆಯಲಿರುವ ಸ್ವಚ್ಚತಾ ಅಭಿಯಾನದ ಕರಪತ್ರ ಪ್ರದರ್ಶನದ ಜತೆಗೆ ಪಂಚಸಪ್ತತಿ ಅಭಿಯಾನದಲ್ಲಿ ಹಮ್ಮಿಕೊಳ್ಳಬಹುದಾದ ಸ್ವಚ್ಚತಾ ಕಾರ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು. ಪರಿಸರ ಸ್ವಚ್ಛತೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಸದಸ್ಯರಾದ ಜಯಂತ ಕುಂಡಡ್ಕ, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ರವಿ ಕುಂಡಡ್ಕ, ವಸಂತ ನಾಯ್ಕ ಕುಂಡಡ್ಕ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಜಗನ್ನಾಥ ರೈ ಮರಿಕೇಯಿ, ಲೋಕನಾಥ ರೈ ಮರಿಕೇಯಿ, ಪ್ರಸಾದ್ ರೈ ಮರಿಕೇಯಿ, ಭರತ್ ಬೊಣ್ಯುಕುಕ್ಕು, ವಾಮನ ನಾಯ್ಕ ಬೊಮ್ಮಂತಗುಂಡಿ, ಸಂಘದ ಕಾರ್ಯದರ್ಶಿ ಮಾಲತಿ, ಹಾಲು ಪರೀಕ್ಷಕಿ ಲಲಿತಾ ಬೀರುಸಾಗು ಮೊದಲಾದವರು ಉಪಸ್ಥಿತರಿದ್ದರು.