ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಅರಿಯಡ್ಕ ವಲಯದ ಶಿವ ನವಜೀವನ ಸಮಿತಿ ಸಭೆ ಅ.10ರಂದು ಕಾವು ವಲಯ ಕಚೇರಿಯಲ್ಲಿ ನವಜೀವನ ಸಮಿತಿಯ ವಲಯ ಅಧ್ಯಕ್ಷ ಸೀತಾರಾಮ ನಾಯ್ಕ ಮೋಡಿಕೆರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನವಜೀವನ ಸಮಿತಿಯ ಪೋಷಕ ಸುಂದರ್ ಜಿ ರವರು ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿ, ಅ.15ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮ್ಮುದಾಯ ಭವನದಲ್ಲಿ ನಡೆಯುವ ಗಾಂಧಿ ಸ್ಮೃತಿ ಕಾರ್ಯಕ್ರಮಕ್ಕೆ ಪರಮ ಪೂಜ್ಯ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆರವರು ಭಾಗವಹಿಸಿ ತಮಗೆಲ್ಲರಿಗೂ ಆಶೀರ್ವದಿಸಲಿದ್ದಾರೆ.
ಕಾರ್ಯಕ್ರಮಕ್ಕೆ ನಮ್ಮ ವಲಯದ ಎಲ್ಲಾ ನವಜೀವನ ಸಮಿತಿಯ ಸದಸ್ಯರು ಯುನಿಫಾರ್ಮ್ ಜೊತೆಗೆ ತಮ್ಮ ತಮ್ಮ ಐಡಿ ಕಾರ್ಡ್ ಹಾಕಿಕೊಂಡು ದಂಪತಿ ಸಮೇತ ಬರುವಂತೆ ಹೇಳಿದರು. ಬಳಿಕ ನವಜೀವನ ಸದಸ್ಯರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಂದನಾರ್ಪಣೆ ಬಳಿಕ ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಯಗೊಂಡಿತು.