ಪುತ್ತೂರು: ವರ್ಷದ ಕೊನೆಯ ಸಿಡಿಲು ಮಿಂಚಿನ ಮಳೆಗೆ ಪುತ್ತೂರಿನ ಶಾಂತಿಗೋಡು ಗ್ರಾಮದ ಆನಡ್ಕದಲ್ಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಅ.11ರ ಸಂಜೆ ನಡೆದಿದೆ.
ಶಾಂತಿಗೋಡು ಗ್ರಾಮದ ಆನಡ್ಕದ ಕಾಯರ್‍ಪು ದಿ.ಬಾಬು ನಾಯ್ಕ ಅವರ ಪುತ್ರ ಅವಿವಾಹಿತ ವಾಮನ ನಾಯ್ಕ (40ವ)ರವರು ಸಿಡಿಲು ಬಡಿದು ಮೃತಪಟ್ಟವರು. ವಾಮನ ಅವರು ಕೂಲಿ ಕೆಲಸ ಮಾಡುತ್ತಿದ್ದು, ಅ.11ರಂದು ಸಂಜೆ ಕೂಲಿ ಕೆಲಸ ಮುಗಿಸಿ ಮನೆಗೆ ಬಂದು ಮನೆಯಂಗಳದ ಜಗಳಿಯಲ್ಲಿ ಕುಳಿತ್ತಿದ್ದರು.
ಇದೇ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮನೆಯಲ್ಲಿ ಅವರ ಸಹೋದರ ಇತರರು ಪುತ್ತೂರು ಹಿತ ಆಸ್ಪತ್ರೆಗೆ ಕರೆದೊಯ್ದರಾದರೂ ಆಗಲೇ ವಾಮನ ಅವರು ಮೃತಪಟ್ಟಿದ್ದರು. ಬಿಜೆಪಿಯ ಸಕ್ರೀಯ ಕಾರ್ಯಕರ್ತರಾದ ಮೃತ ವಾಮನ ನಾಯ್ಕ ಮತ್ತು ಅವರ ಅಣ್ಣ ಗುರುವಪ್ಪ ನಾಯ್ಕ ಜೊತೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಮೃತರು ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ವಾಮನ ಅವರ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ.