ಘನತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ-ವಿಟ್ಲಮುಡ್ನೂರು ಪಿಡಿಒ ವಿರುದ್ದ ಕ್ರಮಕ್ಕೆ ಶಾಸಕ ಅಶೋಕ್ ರೈ ಸೂಚನೆ

0

ಪುತ್ತೂರು; ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಘನ ತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಗ್ರಾಪಂ ಪಿಡಿಒ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಅಶೋಕ್ ರೈ ಮೇಲಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಟ್ಲ ಮುಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಘಟಕವನ್ನು ನಿರ್ಮಾಣ ಮಾಡಲಾಗಿದ್ದು ಇದರ ಉದ್ಘಾಟನೆಗೆ ಶಾಸಕ ಅಶೋಕ್ ರೈ ಅವರನ್ನು ಶಿಷ್ಟಾಚಾರದ ಪ್ರಕಾರ ಆಹ್ವಾನಿಸಬೇಕಿತ್ತು. ಆದರೆ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸಿರಲಿಲ್ಲ,ಉದ್ಘಾಟನಾ ನಾಮಫಲಕದಲ್ಲೂ ಶಾಸಕರ ಹೆಸರನ್ನು ಹಾಕದೆ ಮಾಜಿ ಶಾಸಕರ ಹೆಸರನ್ನು ಹಾಕುವ ಮೂಲಕ ಸರಕಾರಿ‌ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದ್ದರು.

ಈ ಬಗ್ಗೆ ವಿವರಣೆ ಕೇಳಿದಾಗ ನನ್ನ ಗಮನಕ್ಕೆ ಬಾರದೆ ಈ ರೀತಿ ಘಟನೆ ನಡೆದಿದೆ ಎಂದು ಶಾಸಕರಲ್ಲಿ ತಿಳಿಸಿದ್ದರು. ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಪಿಡಿಒ ಸುಜಯ್ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಗತ್ಯ ಬಿದ್ದಲ್ಲಿ ಅವರನ್ನು ಅಮಾನತು ಮಾಡುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಶಿಷ್ಟಾಚಾರದ ಪ್ರಕಾರ ಘನ ತ್ಯಾಜ್ಯ ಘಟಕವನ್ನು ಶಾಸಕರು ಉದ್ಘಾಟನೆ ಮಾಡಬೇಕಿತ್ತು. ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರನ್ನು ಕಡೆಗಣಿಸಿದ ಕಾರಣ ಅವರ ಮೇಲೆ ಕಾನೂನು ಕ್ರಮದ ಸಾಧ್ಯತೆ ನಿಚ್ಚಲವಾಗಿದೆ.

LEAVE A REPLY

Please enter your comment!
Please enter your name here