ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ: ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವೈಷ್ಣವಿ- ಅಭೂತಪೂರ್ವ ಸ್ವಾಗತ

0

ಬಡಗನ್ನೂರು: ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ ಇದರ ವತಿಯಿಂದ ಧಾರವಾಡದಲ್ಲಿ ನಡೆದ ಪ್ರೌಢಶಾಲಾ ವಿಭಾಗದ 17ರ ವಯೋಮಿತಿಯ ರಾಜ್ಯಮಟ್ಟದ ಭಾರ ಎತ್ತುಗೆ (ವೇಟ್ ಲಿಫ್ಟಿಂಗ್) 53 ಕೆ ಜಿ ಭಾಗದ ಸ್ಪರ್ಧೆಯಲ್ಲಿ 78 ಕೆ ಜಿ ಭಾರ ಎತ್ತುವುದರ ಮೂಲಕ ಚಿನ್ನದ ಪದಕ ಪಡೆದ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಮತ್ತು ತರಬೇತುದಾರ ಕೃಷ್ಣಪ್ಪ ಗೌಡ ಇವರನ್ನು ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ಉಪಸ್ಥಿತಿಯಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.

ಸುಳ್ಯಪದವು ಜಂಕ್ಷನ್ ನಲ್ಲಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಎಚ್ ಡಿ ಶಿವರಾಮ್, ಸಂಚಾಲಕರಾದ ಮಹಾದೇವ ಭಟ್ ಕೊಲ್ಯ ವಿದ್ಯಾ ಸಂಸ್ಥೆಗಳ ಮುಖ್ಯ ಶಿಕ್ಷಕರಾದ ಸುಖೇಶ್ ರೈ, ಶಿಕ್ಷಕಿಯರು ಹಾಗೂ ಸ್ಥಳೀಯ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು ಹೂ ಮಾಲೆ, ಶಾಲು ಹೊದಿಸಿ ಗೌರವಿಸಿದರು.

ನಂತರ ನಡೆದ ಮೆರವಣಿಗೆಯಲ್ಲಿ ವಿದ್ಯಾರ್ಥಿನಿ ವೈಷ್ಣವಿ ಮತ್ತು ತರಬೇತುದಾರ ಕೃಷ್ಣಪ್ಪ ಗೌಡ ಇವರನ್ನು ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಶಾಲಾ ಮಕ್ಕಳು ಶಾಲೆ ಸಭಾಭವನ ವರೆಗೆ ಹೆಜ್ಜೆ ಹಾಕಿದರು. ಶಾಲೆಯ ಬ್ಯಾಂಡ್ ಸೆಟ್ ಮೆರವಣಿಗೆ ಶೋಭೆ ತಂದಿತು. ಸಭಾಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಎಚ್ ಡಿ ಶಿವರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.

ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ವೈಷ್ಣವಿ ಮತ್ತು ತರಬೇತುದಾರ ಕೃಷ್ಣಪ್ಪ ಗೌಡ ರವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಂಚಾಲಕರಾದ ಮಹಾದೇವ ಭಟ್ ಕೊಲ್ಯ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಆನಂದ ಪಾದೆ ಗದ್ದೆ, ಅಬ್ದುಲ್ ಖಾದರ್, ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಮರದ ಮೂಲೆ, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಉದಯ ಕುಮಾರ್ ಪಡುಮಲೆ, ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ, ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಂಗಾಧರ್ ಎನ್ ಜಿ ಅಭಿನಂದನಾ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಚಿನ್ನದ ಹುಡುಗಿ ವೈಷ್ಣವಿ ಅವರ ಕುರಿತು ರಚಿಸಿದ ಕವಿತೆಯನ್ನು ವಾಚಿಸಿದರು.

ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಸುಳ್ಯಪದವು, ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ ಸುಳ್ಯಪದವುದವರು, ಎಚ್ ಡಿ ಶಿವರಾಮ್, ಮಹಾದೇವ ಭಟ್, ಅಬ್ದುಲ್ ಖಾದರ್, ಉದಯ ಕುಮಾರ್ ಪಡುಮಲೆ, ಚನಿಯಪ್ಪ ನಾಯ್ಕ, ಗಂಗಾಧರ್ ಎನ್ ಜಿ, ಶಾಲಾ ಶಿಕ್ಷಕ ವೃಂದದವರು ಗೌರವಾರ್ಪಣೆ ಸಲ್ಲಿಸಿದರು.ವಿದ್ಯಾರ್ಥಿನಿ ವೈಷ್ಣವಿಯವರ ತಂದೆ ವಸಂತ ರೈ, ತಾಯಿ ಸುರೇಖಾ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾ ಸಂಸ್ಥೆಗಳ ಮುಖ್ಯ ಶಿಕ್ಷಕ ಸುಖೇಶ್ ರೈ ಪ್ರಾಸ್ತಾವಿಕ ಮಾಯನಾಡಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಪ್ರಶಾಂತಿ ರೈ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರು ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ವೈಷ್ಣವಿ ಇವರು ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಐತ್ತನಡ್ಕ ವಸಂತ ರೈ ಮತ್ತು ಸುರೇಖಾ ದಂಪತಿಗಳ ಪುತ್ರಿ ಇವರಿಗೆ ದೖೆಹಿಕ ಶಿಕ್ಷಣ ಶಿಕ್ಷಕ ಸುಖೇಶ್ ರೖೆ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿ- ನಿವೃತ ಅಂಚೆ ಇಲಾಖೆ ನೌಕರ-ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕೃಷ್ಣಪ್ಪ ಗೌಡ ಡೆಂಬಾಳೆ ತರಬೇತಿ ನೀಡಿರುತ್ತಾರೆ. ರಾಷ್ಟ್ರಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯು ಕಾನ್ಪುರದಲ್ಲಿ ನವೆಂಬರ್ 28ರಂದು ನಡೆಯಲಿದೆ.

LEAVE A REPLY

Please enter your comment!
Please enter your name here