ಪುತ್ತೂರು: ಪಡ್ನೂರು ಗ್ರಾಮದ ಸೇಡಿಯಾಪು ಕೂಟೇಲು ಸಮೀಪ ಹೆಜ್ಜೇನು ದಾಳಿಯಿಂದ ಗಂಭೀರಗೊಂಡ ವಿದ್ಯಾರ್ಥಿನಿ ಮೃತಪಟ್ಟ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ದೂರುದಾರರು ನೀಡಿದ ದೂರಿನಂತೆ ಕಣಜದಹುಳು ದಾಳಿಯಿಂದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆಂದು ಪ್ರಕರಣ ದಾಖಲಾಗಿದೆ.
ಪಡ್ನೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಶಾ(6ವ) ಮೃತಪಟ್ಟವರು. ಅ.10ರಂದು ಸಂಜೆ ವಿದ್ಯಾರ್ಥಿಗಳಾದ ಪಡ್ನೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ ಇಶಾ (6ವ) ಮತ್ತು ಕಿಶೋರ್ ಎಂಬವರ ಪುತ್ರ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಪ್ರತ್ಯೂಶ್ (10ವ) ಮತ್ತು ಸ್ಥಳೀಯ ನಾರಾಯಣ್ (40ವ) ಕಣಜದಹುಳುಗಳ ದಾಳಿಗೆ ತುತ್ತಾಗಿದ್ದರು. ಗಂಭೀರ ಗಾಯಗೊಂಡಿದ್ದ ಇಶಾ ಅವರು ಮೃತಪಟ್ಟಿದ್ದು, ಇನ್ನೋರ್ವ ವಿದ್ಯಾರ್ಥಿ ಪ್ರತ್ಯೂಷ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಕುರಿತು ವಸಂತ ಬಂಗೇರ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.