ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ರಕ್ಷಕ-ಶಿಕ್ಷಕ ಸಭೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಯ್ಯಿದ್ ಯಾಹ್ಯ ತಂಙಳ್ ಪೋಳ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನ ನಿಜವಾದ ಕೀಲಿಕೈ ಪೋಷಕರ ಮತ್ತು ಶಿಕ್ಷಕರ ಪ್ರೀತಿ, ಶ್ರಮ ಹಾಗೂ ಪ್ರಾರ್ಥನೆಯಲ್ಲಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರಕ್ಷಕರು ಮತ್ತು ಶಿಕ್ಷಕರು ಪರಸ್ಪರ ಸಹಕಾರದಿಂದ ಕ್ರಿಯಾಶೀಲರಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ನಗರಸಭಾ ಸದಸ್ಯ ರಿಯಾಝ್ ಇಂಜಿನಿಯರ್ ವಳತ್ತಡ್ಕ, ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜಿನ ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ, ಅಧ್ಯಾಪಕರಾದ ಇಸ್ಮಾಯಿಲ್ ಅನ್ಸಾರಿ, ಹಾಫಿಳ್ ಸಲ್ಮಾನುಲ್ ಫಾರಿಸ್ ಮೊದಲಾದವರು ಮಾತನಾಡಿದರು. ಅಬೂಬಕ್ಕರ್ ಸಿದ್ದೀಕ್ ಅರ್ಶದಿ ಸಾಲೆತ್ತೂರು, ಶಾಹುಲ್ ಹಮೀದ್ ಕೊಡಂಗಾಯಿ, ಹಾಫಿಝ್ ಮೆಹರೂಫ್, ಮೆಹಬೂಬ್ ಹಾಜಿ, ಆಸಿಫ್ ಹಾಜಿ ತಂಬುತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಸ್ವಾಗತಿಸಿ ವಂದಿಸಿದರು.