ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿ. ಉಪ್ಪಿನಂಗಡಿ ಇದರ ಆಡಳಿತ ಮಂಡಳಿಯಲ್ಲಿ ತೆರವಾದ ಕೃಷಿ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ಪ್ರಕಾಶ್ ರೈ ಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಹಿಂಪಡೆಯುವ ದಿನವಾದ ಅ.13ರಂದು ಪುತ್ತಿಲ ಪರಿವಾರದಿಂದ ಸ್ಪರ್ಧಿಸಿದ್ದ ಹರಿಪ್ರಸಾದ್ ಶೆಟ್ಟಿ, ಧರ್ನಪ್ಪ ನಾಯ್ಕ ಹಾಗೂ ಸಹಕಾರ ಭಾರತಿಯ ಇನ್ನೋರ್ವ ಅಭ್ಯರ್ಥಿ ಸದಾನಂದ ಶೆಟ್ಟಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಚಂದ್ರ ಜಿ ನಾಮಪತ್ರ ಹಿಂಪಡೆದಿದ್ದು, ಇದರಿಂದಾಗಿ ಸಹಕಾರಿ ಭಾರತೀಯ ಪ್ರಕಾಶ್ ರೈ ಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಚುನಾವಣಾ ಅಧಿಕಾರಿ ಅಧಿಕೃತ ಘೋಷಣೆ ಇನ್ನಷ್ಟೇ ಮಾಡಬೇಕಾಗಿದೆ.