ರಾಯಲ್ ಎನ್ ಫೀಲ್ಡ್ ಬೈಕ್ ಖರೀದಿಗೆ ವಿಪುಲ ಅವಕಾಶ
ಪುತ್ತೂರು: ರಾಯಲ್ ಎನ್ಫೀಲ್ಡ್ ಬೈಕ್ಗಳ ಅಧಿಕೃತ ವಿತರಕರಾಗಿರುವ ಬೊಳುವಾರಿನ ಏಸ್ ಮೊಬೈಕ್ಸ್ ಎರಡನೇ ವರ್ಷದ ಪಾದಾರ್ಪಣೆಯ ಸಂಭ್ರಮದಲ್ಲಿ ರಾಯಲ್ ಎನ್ ಫೀಲ್ಡ್ ಖರೀದಿಸುವವರಿಗೆ ವಿಫುಲ ಅವಕಾಶಗಳನ್ನು ನೀಡುತ್ತಿದೆ.

ಏಸ್ ಮೊಬೈಕ್ಸ್ನಲ್ಲಿ ಯುವ ಜನತೆಯನ್ನು ಆಕರ್ಷಿಸುವ 10ಕ್ಕೂ ಅಧಿಕ ಮಾದರಿಯ ರಾಯಲ್ ಎನ್ ಫೀಲ್ಡ್ ಗಳ ಬೃಹತ್ ಸಂಗ್ರಹವಿದೆ. ಗ್ರಾಹಕರ ಮನದಿಚ್ಚೆಯ ಆಕರ್ಷಕ ಎಲ್ಲಾ ಬಣ್ಣಗಳಲ್ಲಿ ಲಭ್ಯವಿದೆ. ಸೇಲ್ಸ್, ಸರ್ವೀಸ್ ಹಾಗೂ ಎಕ್ಸಸರೀಸ್ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ. ಕನಿಷ್ಠ ದಾಖಲೆಯೊಂದಿಗೆ, ಅತೀ ಕಡಿಮೆ ರೂ.4,999 ಮತ್ತು ರೂ.7,999 ಡೌನ್ ಪೇಮೆಂಟ್ ಮಾಡಿ ಹೊಚ್ಚ ಹೊಸ ರಾಯಲ್ ಎನ್ ಫೀಲ್ಡ್ ನಿಮ್ಮದಾಗಿಸಬಹುದು. ಸುಲಭ ಹಣಕಾಸು, ಸಾಲ ಸೌಲಭ್ಯ, ತಕ್ಷಣ ಬುಕ್ಕಿಂಗ್ ತಕ್ಷಣ ಡೆಲಿವರಿ ದೊರೆಯಲಿದೆ. ಆಧುನಿಕ ತಂತ್ರಜ್ಞಾನಗಳೊಂದಿಗೆ ನುರಿತ ಅನುಭವಿ ಮೆಕ್ಯಾನಿಕ್ ಗಳಿಂದ ಸರ್ವೀಸ್ ದೊರೆಯಲಿದೆ. ರೂ.2.25 ಲಕ್ಷದ ಹಂಟರ್ 350 ಈಗ ಡಿಸ್ಕೌಂಟ್ ಬೆಲೆಯಲ್ಲಿ ರೂ.2ಲಕ್ಷ ನಿಮ್ಮದಾಗಿಸಬಹುದು. ಜಿಎಸ್ಟಿ ಇಳಿಕೆಯ ಸೌಲಭ್ಯವನ್ನು ಪಡೆಯಬಹುದು. ಎಕ್ಸ್ಶೋ ರೂಂ ಬೆಲೆ ರೂ.1.49 ಲಕ್ಷದಿಂದ ಪ್ರಾರಂಭಗೊಂಡು ರೂ.ರೂ.3.94 ಲಕ್ಷದ ರಾಯಲ್ ಎನ್ ಫೀಲ್ಡ್ ಬೈಕ್ಗಳು ಲಭ್ಯವಿದೆ. ಷರತ್ತುಗಳು ಅನ್ವಯಿಸಲಿದೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಶೋರೂಂ, ಪ್ರತ್ಯೇಕ ಸರ್ವಿಸ್ ವಿಭಾಗಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ರಾಯಲ್ ಎನ್ಫೀಲ್ಡ್ನಲ್ಲಿ ತರಬೇತಿ ಪಡೆದ ಮೆಕ್ಯಾನಿಕ್ಗಳಿಂದ ಗುಣಮಟ್ಟದ ಸರ್ವಿಸ್ಗಳನ್ನು ನೀಡಲಾಗುತ್ತಿದ್ದು ರಾಯಲ್ ಎನ್ ಫೀಲ್ಡ್ ನಿಮ್ಮದಾಗಿಸಿಕೊಳ್ಳಬಹುದು. ಎಲ್ಲಾ ವಿಧದ ರಾಯಲ್ ಎನ್ ಫೀಲ್ಡ್ ಗಳು ಪ್ರದರ್ಶನ ಹಾಗೂ ಟೆಸ್ಟ್ ರೈಡ್ಗೆ ಲಭ್ಯವಿದೆ. ಬುಕ್ ಮಾಡಿದ ಕೆಲವೇ ದಿನಗಳಲ್ಲಿ ಗ್ರಾಹಕರಿಗೆ ವಿತರಣೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಶೋ ರೂಂ ಭೇಟಿ ನೀಡಿ ಅಥವಾ 7022003169 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಮ್ಹಾಲಕ ಆಕಾಶ್ ಐತಾಳ್ ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಸುಳ್ಯದಲ್ಲಿ ಶೋ.ರೂಂ
ಸುಳ್ಯ ಭಾಗದ ಬುಲೆಟ್ ಪ್ರಿಯರಿಗೆ ಸಿಹಿಸುದ್ದಿ ನೀಡುತ್ತಿದ್ದು ರಾಯಲ್ ಎನ್ ಫೀಲ್ಡ್ ಸೇಲ್ಸ್, ಸರ್ವೀಸ್ ಹಾಗೂ ಸ್ಪೇರ್ ಗಳ ಸುಸಜ್ಜಿತ ಶೋ.ರೂಂ ಈ ವಾರಾಂತ್ಯದಲ್ಲೇ ಸುಳ್ಯದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.