ಶೇಟ್ ಎಲೆಕ್ಟ್ರಾನಿಕ್ಸ್ ವತಿಯಿಂದ ದೀಪಾವಳಿ ಧಮಾಕ :ಕಿಲ್ಲೆ ಮೈದಾನದಲ್ಲಿ ಬೃಹತ್ ಮಾರಾಟ ಆರಂಭ

0

ಪುತ್ತೂರು: ಈ ವರ್ಷದ ಅನೇಕ ಹಬ್ಬಗಳು ಸರಿದವು. ದೀಪಾವಳಿ ಸಮೀಪಿಸುತ್ತಿದೆ. ಎಲ್ಲೆಡೆಯೂ ಆಫರ್‌ಗಳ ಭರಾಟೆ ಆರಂಭವಾಗಿದೆ. ಅದರಂತೆ ಪುತ್ತೂರಿನ ಚಿನ್ನರ ಪಾರ್ಕ್ ಬಳಿ ಕಳೆದ 25 ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಶೇಟ್ ಎಲೆಕ್ಟ್ರಾನಿಕ್ಸ್, ದೀಪಾವಳಿ ಪ್ರಯುಕ್ತ ಕಿಲ್ಲೆ ಮೈದಾನದಲ್ಲಿ ಆಫರ್‌ಗಳ ಮಹಾ ಮೇಳ ಆರಂಭಿಸಿದೆ.
ಅ.15 ರಿಂದ ಶಾಪಿಂಗ್ ಹಬ್ಬದ ಸಂಭ್ರಮ ಆರಂಭಗೊಂಡಿದ್ದು, ತಿಂಗಳಾಂತ್ಯದವರೆಗೆ ಆಫರ್ ಮೂಲಕ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಅವಕಾಶ ಇದೆ. ಕಿಲ್ಲೆ ಮೈದಾನದ ಪುರಭವನದ ಆವರಣದಲ್ಲಿ ಈ ಮೇಳ ನಡೆಯುತ್ತಿರುವುದರಿಂದ ಗ್ರಾಹಕರು ವಾಹನಗಳನ್ನು ಪಾರ್ಕ್ ಮಾಡಲು ಬೃಹತ್ ಸ್ಥಳಾವಕಾಶವೂ ಇದೆ.


ಈ ಮಹಾ ಮೇಳದಲ್ಲಿ 1.51 ಲಕ್ಷದ ವರೆಗಿನ ಎಲೆಕ್ಟ್ರಾನಿಕ್ಸ್ ವಸ್ತುಗಳು ಲಭ್ಯವಿದ್ದು, 10 ಸಾವಿರ ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ ನೀಡಲಾಗುತ್ತಿದೆ. 2000 ರೂ. ಮೇಲ್ಪಟ್ಟು ಖರೀದಿ ಮೇಲೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು, ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶವೂ ನಿಮ್ಮದಾಗಿಸಿಕೊಳ್ಳಿ. ಅಲ್ಲದೆ, ದೀಪೋತ್ಸವ 2025ರ ಪ್ರಯುಕ್ತ ಮತ್ತೊಂದು ಲಕ್ಕಿ ಕೂಪನ್ ನೀಡಲಾಗುತ್ತಿದ್ದು, ಕಾರು, ಬೈಕ್, ಸ್ಕೂಟರ್ ಬಂಪರ್ ಬಹುಮಾನ ಹಾಗೂ ಇನ್ನಿತರ ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದೆ.

ಫ್ರಿಡ್ಜ್, ಟಿವಿ, ವಾಷಿಂಗ್ ಮೆಷಿನ್, ಸೋಫಾ ಸೆಟ್, ಎಸಿ, ಗೋಡ್ರೇಜ್ ಸೇರಿದಂತೆ ಇನ್ನಿತರ ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮೇಳದಲ್ಲಿ ಖರೀದಿಸಬಹುದಾಗಿದ್ದು, ಆದಿತ್ಯವಾರವೂ ಖರೀದಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 7022306099, 7022306090 ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here