ಪುತ್ತೂರು:ನಗರಸಭೆಯ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳ ಪಾರ್ಕಿಂಗ್ ಶೆಡ್ನಲ್ಲಿ ಖಾಸಗಿ ಎಲೆಕ್ಟ್ರೋನಿಕ್ಸ್ ಅಂಗಡಿಯ ಸೊತ್ತುಗಳು ದಾಸ್ತಾನು ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಗರಸಭೆ ಮಾಜಿ ವಿಪಕ್ಷ ನಾಯಕ ಎಚ್.ಮಹಮ್ಮದ್ ಆಲಿ ಅವರು ದೂರು ನೀಡಿದ ತರಾಟೆಗೆತ್ತಿಕೊಂಡ ಬಳಿಕ ಅಧಿಕಾರಿಗಳು ಸೊತ್ತುಗಳನ್ನು ತೆರವು ಮಾಡಿಸಿರುವ ಘಟನೆ ವರದಿಯಾಗಿದೆ.
ನಗರಸಭೆಯ ವಾಹನ ಪಾರ್ಕಿಂಗ್ ಶೆಡ್ನಲ್ಲಿ ಖಾಸಗಿ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲಕರು ತಮ್ಮ ಅಂಗಡಿಯಲ್ಲಿಟ್ಟಿರುವ ಫ್ರಿಡ್ಜ್,ಟಿವಿ,ಇನ್ನಿತರ ಸಾಮಗ್ರಿಗಳ ಬಾಕ್ಸ್ಗಳನ್ನು ದಾಸ್ತಾನು ಇಟ್ಟಿದ್ದರು.ಇದರಿಂದಾಗಿ ನಗರಸಭಾ ವಾಹನಗಳಿಗೆ ಪಾರ್ಕಿಂಗ್ ಮಾಡಲು ಶೆಡ್ನಲ್ಲಿ ಅವಕಾಶವಿಲ್ಲದೆ ಮಳೆಗೆ ಹೊರಗಡೆ ಪಾರ್ಕಿಂಗ್ ಮಾಡುವ ಪರಿಸ್ಥಿತಿ ಉಂಟಾಗಿತ್ತು ಎಂದು ಎಚ್. ಮಹಮ್ಮದ್ ಆಲಿಯವರು ನಗರಸಭೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರಲ್ಲದೆ, ಈ ಕುರಿತು ದೂರು ನೀಡಿದರು.ಬಳಿಕ ಅಧಿಕಾರಿಗಳು ವಾಹನ ಶೆಡ್ನಲ್ಲಿರುವ ದಾಸ್ತಾನನ್ನು ತೆರವು ಮಾಡಿಸಿದ್ದಾರೆ.