




ಕಾಣಿಯೂರು: ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ನೂತನ ಸಮಿತಿಯನ್ನು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಿತ್ ಮಾಚಿಲ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ನೂತನ್ ಭಟ್ ಮಾಚಿಲ, ಉಪಾಧ್ಯಕ್ಷರಾಗಿ ವಿನಿತ್ ಅಂಬುಲ, ಕಾರ್ಯದರ್ಶಿಯಾಗಿ ಕಾರ್ತಿಕ್ ಉದಲಡ್ಡ, ಜೊತೆ ಕಾರ್ಯದರ್ಶಿಯಾಗಿ ನರೇನ್ ಅರುವ, ಕೋಶಾಧಿಕಾರಿಯಾಗಿ ಟಿನಿತ್ ಕುಂಬ್ಲಾಡಿರವರನ್ನು ಆಯ್ಕೆಮಾಡಲಾಯಿತು.












