ಶಾಸಕ ರಾಜೇಶ್ ನೖಾಕ್ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ

0

ಬಡಗನ್ನೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ಆದಿದೈವ ಧೂಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯರ ಮೂಲಸ್ಥಾನಕ್ಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನೖಾಕ್  ಅ. 17 ರಂದು ಭೇಟಿ ನೀಡಿ ಶ್ರೀ ಆದಿದೈವ ಧೂಮಾವತಿ ಹಾಗೂ  ಶ್ರೀ  ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

  ಕ್ಷೇತ್ರದ ತಂತ್ರಿವರ್ಯರಾದ ಶಿವಾನಂದ ಶಾಂತಿ ಮೂಡುಬಿದ್ರಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.ಬಳಿಕ ಶ್ರೀ ಕೋಟಿ ಚೆನ್ನಯ್ಯ ಬಾಲ ಗರಡಿ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಕ್ಷೇತ್ರದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್,  ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್. ಸಿ ನಾರಾಯಣ ರೆಂಜ, ಪುತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಣಿಕಂಠ , ನಗರ ವಲಯ ಕಾರ್ಯದರ್ಶಿ ಶ್ರೀಧರ ನಾಯಕ್, ನಗರ ಮಂಡಲ ಆಧ್ಯಕ ಶಿವಕುಮಾರ್ ಪಿ. ಬಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರಿಮಾರು,  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here