






ಪುತ್ತೂರು: ಅಶೋಕ ಜನಮನ ಕುರಿತು ಮಾಜಿ ಶಾಸಕರು ಮತ್ತು ಬಿಜೆಪಿ ಮಂಡಲದ ಅಧ್ಯಕ್ಷರು ಮಾಡಿರುವ ಸುಳ್ಳು ಆರೋಪ ಅವರ ವ್ಯಕ್ತಿತ್ವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಇಡುಗಂಟು ಕೂಡಾ ನಿಮಗೆ ಸಿಗುವುದಿಲ್ಲ ಎಂಬುದನ್ನು ಚಿಂತಿಸಿ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಮಾಜಿ ಶಾಸಕರಿಗೆ ಮತ್ತು ಬಿಜೆಪಿ ಮಂಡಲದ ಅಧ್ಯಕ್ಷರಿಗೆ ಪತ್ರಿಕಾಗೋಷ್ಟಿಯಲ್ಲಿ ಸವಾಲು ಹಾಕಿದ್ದಾರೆ.



ಬಿಜೆಪಿ ಕಳೆದ ಚುನಾವಣೆಯಲ್ಲಿ ಕೇವಲ 37 ಸಾವಿರ ಮತ ಪಡೆದಿದೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಇಡುಗಂಡನ್ನು ಕೂಡಾ ಕಳೆದುಕೊಳ್ಳುವ ಪರಿಸ್ಥಿತಿ. ಅದರ ಬಗ್ಗೆ ಚಿಂತಿಸಿ. ಅದು ಬಿಟ್ಟು ಒಳ್ಳೆಯ ಕೆಲಸ ಮಾಡುವವರ ಕುರಿತು ಮಾತನಾಡುವುದುನ್ನು ಈ ಸಮಾಜ ಒಪ್ಪುವುದಿಲ್ಲ. ಜನಮನ ಕಾರ್ಯಕ್ರಮಕ್ಕೆ ಯಾವ ವಾಹನಗಳು ಇಲ್ಲದೆ ಕೇವಲ ಶಾಸಕರ ಪ್ರೀತಿಗಾಗಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದಾದರೆ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಪಂಚ ಗ್ಯಾರೆಂಟಿ, ಶಾಸಕರ ಪುತ್ತೂರಿನ ಅಭಿವೃದ್ಧಿ ಕಾರ್ಯಕ್ರಮದಿಂದ ಜನ ಬದಲಾವಣೆ ಆಗುತ್ತಿದ್ದಾರೆ ಎಂಬುದರ ಬಗ್ಗೆ ತಲೆಬಿಸಿ ಮಾಡುವುದು ಬಿಟ್ಟು ಕಾರ್ಯಕ್ರಮದಲ್ಲಿ ಮೋಸ ಆಗಿದೆ, ಆಸ್ಪತ್ರೆಗೆ ಹೋಗಿದ್ದಾರೆ ಎಂದು ಆರೋಪ ಮಾಡುವುದು ಸರಿಯಲ್ಲ. ಸಮಸ್ಯೆಗೆ ಒಳಗಾದವರಿಗೆ ಟ್ರಸ್ಟ್ನ ಮೂಲಕ ಆರೋಗ್ಯ ಸೇವೆ ನೀಡಿದ್ದೇವೆ. ಅವರಿಗೆ ಪರಿಹಾರ ಕೊಡಲು ಬದ್ಧರಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲ. ಇದು ಟ್ರಸ್ಟ್ನ ಅಡಿಯಲ್ಲಿ ಆಗಿರುವುದು. ಖಾಸಗಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ತರಿಸುವುದು ಅಷ್ಟು ಸುಲಭವಲ್ಲ. ಆದರೆ ನಮ್ಮ ಶಾಸಕರು ಮಾಡಿ ತೋರಿಸಿದ್ದಾರೆ. ಮೆಡಿಕಲ್ ಕಾಲೇಜು ಎಲ್ಲರಿಗೂ ಗೊಂದಲವಿತ್ತು. ಮುಖ್ಯಂತ್ರಿಯವರು ಅದಕ್ಕೂ ಪರಿಹಾರ ನೀಡಿದ್ದಾರೆ. ಜೊತೆಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳು ಮಧ್ಯಾಹ್ನ 1.30ಕ್ಕೆ ಬಂದಿರುವುದು ಅರ್ಥ ಮಾಡಿಕೊಳ್ಳಬೇಕು. ಟೀಕೆ ಮಾಡುವಾಗ ಅದರಲ್ಲಿ ಸತ್ಯಾಂಶ, ಮೌಲ್ಯ ಇರಬೇಕು. ಸುಳ್ಳು ಹೇಳಿಕೆಯಿಂದ ಜನರನ್ನು ವಂಚಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದ ಅವರು ಪುತ್ತೂರಿನ ಸಮಗ್ರ ಅಭಿವೃದ್ಧಿಯಾಗುವುದನ್ನು ಒಪ್ಪಿಕೊಳ್ಳುವ ಕೆಲಸ ಆಗಬೇಕು. ರಾಜಕೀಯವಾಗಿ ನಾನು ಮಾತನಾಡುವುದಿಲ್ಲ. ಸತ್ಯವನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕು. ಮಾಜಿ ಶಾಸಕರ ಬಗ್ಗೆ ಮಾತನಾಡಲು ಹೊರಟರೆ ಅದನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದರು.





ಇತಿಹಾಸ ಸೃಷ್ಟಿಸಿದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಂದಲೇ ಶ್ಲಾಘನೆ:
ಅಶೋಕ ಜನಮನ ಇತಿಹಾಸ ಸೃಷ್ಟಿಮಾಡಿದೆ. ಮುಖ್ಯಮಂತ್ರಿಗಳಿಂದಲೇ ಆ ಮಾತು ಕೇಳಿ ಬಂದಿದೆ. ಇದೊಂದು ದೊಡ್ಡ ಕಾರ್ಯಕ್ರಮ.
ಪಕ್ಷದ ಕಾರ್ಯಕ್ರಮಗಳು ಮಂಗಳೂರು ನೆಹರು ಮೈದಾನದಲ್ಲಿ ನಡೆಯುತ್ತದೆ. ಪ್ರಧಾನಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಬರುವ ಕಾರ್ಯಕ್ರಮ ಸಹಿತ ಹಲವಾರು ರಾಜಕೀಯ ಕಾರ್ಯಕ್ರಮಗಳಿಗೆ ವಾಹನದಲ್ಲಿ ಜನಸೇರಿಸುವ ಕೆಲಸ ಆಗುತ್ತದೆ. ಆದರೆ ಇಲ್ಲಿ ಯಾವುದೇ ಒಂದು ವಾಹನ ಕೊಡದೆ ಒಂದು ರೀತಿಯಲ್ಲಿ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಕಾರ್ಯಗಳ ಮತ್ತು ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಒಂದು ಈ ರೀತಿಯ ಜನಸ್ತೋಮ ಸೇರಿದ್ದಾರೆ. ನಮ್ಮ ವಿರೋಧಿ ಆದರೂ ಕೂಡಾ ಒಳ್ಳೆಯ ಕಾರ್ಯಕ್ರಮ ಮಾಡುವಾಗ ಅದರಲ್ಲಿ ತಪ್ಪು ಹುಡುಕಿ ಸುಳ್ಳು ಸುಳ್ಳು ಹೇಳುವುದು ಸರಿಯಲ್ಲ ಎಂದು ಹೇಳುವುದು ನಮ್ಮ ವಾದ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಮಳೆಯಿಂದ ಸಣ್ಣಪುಟ್ಟ ವ್ಯತ್ಯಾಸ:
ಸಣ್ಣಪುಟ್ಟ ವ್ಯತ್ಯಾಸ ಮಳೆಯಿಂದ ಆಗಿದೆ ಹೊರತು ಬೇರಾವ ಸಮಸ್ಯೆ ಆಗಿರಲಿಲ್ಲ. ನಾಲ್ಕೈದು ಬಾರಿ ಬೇರೆ ಬೇರೆ ರೀತಿಯಲ್ಲಿ ಟ್ರಸ್ಟ್ನ ಸಭೆ ನಡೆಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲಾಗಿದೆ. ಆದರೆ ಕಾರ್ಯಕ್ರಮದ ದಿನ ವಿಪರೀತ ಮಳೆ ಬಂದಿದೆ. ಮಳೆ ಬಂದರೂ ಕಾರ್ಯಕ್ರಮದಲ್ಲಿ ತೊಡಕಾಗಿಲ್ಲ. ಬಂದವರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಇಷ್ಟು ಜನರನ್ನು ಸುಧಾರಿಸುವ ಸಣ್ಣ ಕೆಲಸವೂ ಅಲ್ಲ. ಶಾಸಕರು ಮತ್ತು ಅವರ ಕುಟುಂಬ ಹಾಗು ಟ್ರಸ್ಟ್ನ ಕಾರ್ಯಕರ್ತರು ಮಳೆಯಲ್ಲಿ ಒದ್ದೆಯಾಗಿ ಬಂದ ಜನರನ್ನು ಸುಧಾರಿಸುವ ಚಿತ್ರಣ ನೋಡಿದ್ದೇವೆ. ಅದನ್ನು ಬಿಟ್ಟು ತಪ್ಪು ಹುಡುಕುವುದು ಶೋಭೆ ತರುವಂತಹದ್ದು ಅಲ್ಲ ಎಂದು ಹೇಮನಾಥ ಶೆಟ್ಟಿ ಹೇಳಿದರು.
1 ಸಾವಿರ ಸಂಖ್ಯೆ ಸೇರಿಸಿ ಕಾರ್ಯಕ್ರಮ ಮಾಡಲಿ ನೋಡೋಣ:
ಮಾಜಿ ಶಾಸಕರು ತಮ್ಮ ಆರೋಪದಲ್ಲಿ ಕಾರ್ಯಕ್ರಮದಲ್ಲಿ 15 ಸಾವಿರ ಚಯರ್ ಮಾತ್ರ ಇದ್ದಿರುವುದಾಗಿ ಹೇಳಿದ್ಧಾರೆ. ಆದರೆ ಮಾಜಿ ಶಾಸಕರಿಗೆ ಎಷ್ಟು ಜನ ಸೇರಿದ್ದಾರೆಂಬುದು ಹೇಗೆ ಗೊತ್ತು. ನಮ್ಮ ನಿರೀಕ್ಷೆ 1 ಲಕ್ಷ ಜನ. ಆದರೆ 1 ಲಕ್ಷಕ್ಕೂ ಮಿಕ್ಕಿ ಜನ ಬಂದಿದ್ದಾರೆ. ಬೆಳಗ್ಗೆ ಗಂಟೆ 9 ರಿಂದ ರಾತ್ರಿ ಗಂಟೆ 10 ಗಂಟೆಯ ತನಕ ಜನಸಾಗರ ಬಂದು ಹೋಗುತ್ತಿತ್ತು. ಪುತ್ತೂರು ಪೇಟೆಯಲ್ಲಿಂದಲೇ ಜನಸಾಗರ ಇತ್ತು. ಒಮ್ಮೆ ಕೂತುಕೊಂಡವನ್ನು ಲೆಕ್ಕ ಹಾಕವುದು ಸರಿಯಲ್ಲ. 1 ಲಕ್ಷ ಜನ ಸೇರಿಸಿ ಭಾಷಣ ಮಾಡುವುದು ಅಲ್ಲ. ಬೆಳಗ್ಗಿನಿಂದ ರಾತ್ರಿಯ ತನಕ ಬಂದವರಿಗೆ ಎಲ್ಲರಿಗೂ ಉಡುಗೊರೆ ಕೊಡುವ ಕಾರ್ಯಕ್ರಮವಾಗಿದೆ. ಶಾಸರಕು ಈ ಮೊದಲೇ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಯಾರಲ್ಲೂ ಕಲೆಕ್ಷನ್ ಮಾಡಿಲ್ಲ. ಅವರ ಸಂಪಾದನೆಯ ಒಂದಾಂಶವನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಅದಕ್ಕೆ ಹೊಟ್ಟೆನೋವು ಯಾಕೆ? ವಿರೋಧ ಮಾಡುವವರು, ಟೀಕಿಸುವವರು ನಿಮ್ಮ ಯೋಗ್ಯತೆಗೆ 1 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡಲಿ. ಏನಾದರು ಉಚಿತ ಉಡುಗೊರೆ ಕೊಡಲಿ ನೋಡೋಣ ಎಂದ ಅವರು ಬಿಜೆಪಿಯವರು ಇಷ್ಟು ವರ್ಷ ಏನಾದರೂ ಕೊಟ್ಟದ್ದು ಉಂಟಾ? ಎಂದು ಕಾವು ಹೇಮನಾಥ ಶೆಟ್ಟಿ ಪ್ರಶ್ನಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಲ್ಯಾನ್ಸಿಮೆಸ್ಕರೇನಸ್, ಅನ್ವರ್ ಖಾಸಿಂ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರಿತ್ ಕಣ್ಣರಾಯ ಉಪಸ್ಥಿತರಿದ್ದರು.








