





ಪುತ್ತೂರು : ಬೆಳ್ಳಿಯ ಹರಕೆಯ ಸಾಮಾಗ್ರಿಗಳು ,ವಿವಿಧ ಬಗೆಯ ರತ್ನಗಳು , ಕ್ರಿಸ್ಟಲ್ಸ್ ಮತ್ತು ಪವಿತ್ರವಾದ ದೈವಿಕ ವಸ್ತುಗಳ ಮಾರಾಟ ಮಳಿಗೆ ಶ್ರೀ ಸಾಯಿ ಜ್ಯೋತಿರ್ವಿಜ್ಞಾನ ಕೇಂದ್ರ ಅ.24 ರಂದು ದರ್ಬೆ ವಿಶಾಲ್ ಮಾರ್ಟ್ ಬಳಿಯ ವರದರಾಜ್ ಸಂಕೀರ್ಣದಲ್ಲಿ ಧಾರ್ಮಿಕ ಕೈಂಕರ್ಯದೊಂದಿಗೆ ಶುಭಾರಂಭಗೊಂಡಿತು.


ಅರ್ಚಕ ಲಕ್ಷ್ಮೀಶ ಭಟ್ ಧಾರ್ಮಿಕ ಕಾರ್ಯ ನೆರವೇರಿಸಿ , ಮಳಿಗೆಯ ಶ್ರೆಯೋಭಿವೃದ್ಧಿಗೆ ಹಾರೈಸಿದರು. ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಮಾಲೀಕ ಸೀತಾರಾಮ ರೈ ಕೆದಂಬಾಡಿ ದೀಪ ಪ್ರಜ್ವಲನೆ ಮೂಲಕ ಮಳಿಗೆ ಉದ್ಘಾಟಿಸಿ , ಶುಭ ಹಾರೈಸಿದರು.





ವರದರಾಜ್ ಕಾಂಪ್ಲೆಕ್ಸ್ ಮಾಲೀಕ ವಾಸುದೇವ ಪೈ , ದರ್ಬೆ ಗಣೇಶ್ ಟ್ರೇಡರ್ಸ್ ಮಾಲೀಕ ವಾಮನ್ ಪೈ ,ಸಂಶೋಧನಾ ಪ್ರಾಧ್ಯಾಪಕರಾದ ಡಾ| ರಾಜೇಶ್ ಬೆಜ್ಜಂಗಳ ,
ಗಣೇಶ್ ಭಟ್ ನೈತಾಡಿ ,ಲವ ಕುಮಾರ್ ಮುಂಡೂರು- ಕಂಪ ಹಾಗೂ ರೇಖಿ ಶಿಕ್ಷಕರಾದ ತಾರಾನಾಥ್ ಮತ್ತು ಪ್ರಕೃತಿ ಡಿಜಿಟಲ್ಸ್ ನ ಗಣೇಶ್ ಸಹಿತ ಹಲವರು ಅತಿಥಿಗಳು ಆಗಮಿಸಿ , ನೂತನ ಮಳಿಗೆಗೆ ಶುಭಕೋರಿದರು.
ಸೇವಾರತ್ನ ಪ್ರಶಸ್ತಿ ಪುರಸ್ಕೃತ ಜ್ಯೋತಿಷ್ಯರಾದ ಶಿವಪ್ರಸಾದ್ ಭಾರದ್ವಾಜ್ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ , ನಮ್ಮಲ್ಲಿ ಜ್ಯೋತಿಷ್ಯ ಸೇವೆಗಳಾದ ಪ್ರಶ್ನಾ ಚಿಂತನೆ , ಜಾತಕ ತಯಾರಿ ಮತ್ತು ಜಾತಕ ವಿಮರ್ಶೆ ಇತ್ಯಾದಿ ಸೇವೆಗಳೂ ಕೂಡ ಲಭ್ಯವಿದ್ದು , ಮಳಿಗೆಯಲ್ಲಿ ಪೂಜಾ ಸಾಮಾಗ್ರಿಗಳು ಕೂಡ ಸಿಗುತ್ತವೆಯೆಂದು ಮಾಹಿತಿ ನೀಡಿದ ಅವರು ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿ, ವಂದಿಸಿದರು.








