




ನೆಲ್ಯಾಡಿ: ಕಾರು ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಪಂಜಳ ಎಂಬಲ್ಲಿ ಡಿ.12ರಂದು ಸಂಜೆ ನಡೆದಿದೆ.



ಉಪ್ಪಿನಂಗಡಿಯಿಂದ ವಳಾಲು ಕಡೆಗೆ ಭವಿತ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು(ಕೆಎ21 ಝೆಡ್ 4446) ಪಂಜಳ ಎಂಬಲ್ಲಿ ಬಜತ್ತೂರು ಎಂಜಿರಡ್ಕ ನಿವಾಸಿ ರವಿ ಪಿ., ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ಗೆ (ಕೆಎ 21 ಇಇ 8115) ಹಿಂದಿನಿಂದ ಡಿಕ್ಕಿಯಾಗಿದೆ. ಘಟನೆಯಲ್ಲಿ ಸ್ಕೂಟರ್ ಸವಾರ ರವಿ ಪಿ.(54ವ.), ಸಹಸವಾರರಾದ ಲತಾ ಹಾಗೂ ಧನುಷ್ (10ವ.) ಅವರು ಗಾಯಗೊಂಡಿದ್ದು ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.





ಅಪಘಾತದ ಬಳಿಕ ಆರೋಪಿ ಕಾರು ಚಾಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸದೇ ಹಾಗೂ ಪೊಲೀಸ್ ಠಾಣೆಗೂ ಮಾಹಿತಿ ನೀಡದೆ ಪರಾರಿಯಾಗಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಸ್ಕೂಟರ್ ಸವಾರ ರವಿ ಪಿ.ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









