





ಕಡಬ: ಜ್ಞಾನಸುಧ ವಿದ್ಯಾಲಯ ಕಡಬ ಆಶ್ರಯದಲ್ಲಿ ಕಸ್ವಿ ಹಸಿರು ದಿಬ್ಬಣ ನಿರ್ಮಾಣದ ನ್ಯಾಷನಲ್ ಅವಾರ್ಡ್ ವಿಜೇತ ಕನ್ನಡ ಕಿರುಚಿತ್ರ ಹರಿದ್ವರ್ಣ ಇದರ 13ನೇ ಪ್ರದರ್ಶನಗೊಂಡಿತು.


ಈ ಕಾರ್ಯಕ್ರಮದಲ್ಲಿ ಜ್ಞಾನಸುಧ ವಿದ್ಯಾಲಯ ಸಂಸ್ಥೆಯ ಸ್ಥಾಪಕರಾದ ಬಿ ಎಲ್ ಜನಾರ್ಧನ್ ಅವರು ಮಾತನಾಡಿ, ಜ್ಞಾನಸುಧಾ ವಿದ್ಯಾಲಯ ಸಂಸ್ಥೆ ಅನೇಕ ಶಿಕ್ಷಕರನ್ನು ರೂಪಿಸುವಲ್ಲಿ ಶ್ರಮಿಸುತ್ತಿದೆ. ಶಿಕ್ಷಕರು ಜಾಗೃತರಾದರೆ ನೂರಾರು ಮಕ್ಕಳು ಜಾಗೃತರಾದಂತೆ ಈ ಹರಿದ್ವರ್ಣ ಕನ್ನಡ ಕಿರುಚಿತ್ರವನ್ನು ನಮ್ಮ ಶಾಲೆಯಲ್ಲಿ ತೋರಿಸಿ ನಮ್ಮ ಶಿಕ್ಷಕರು ಖಂಡಿತ ಅವರ ಶಾಲೆಯಲ್ಲಿ ಇದರಲ್ಲಿ ಸಂದೇಶವನ್ನು ಅನುಷ್ಠಾನಗೊಳಿಸುತ್ತಾರೆ ಎನ್ನುವಂತಹ ಭರವಸೆಯನ್ನು ನೀಡಿ ಚಿತ್ರತಂಡಕ್ಕೆ ಶುಭಕೋರಿದರು.






ಶಿವಪ್ರಸಾದ್ ರೈ ಮೈಲೇರಿ ಇವರು ಮಾತನಾಡಿ, ಯೋಚನೆ ಮತ್ತು ಯೋಜನೆ ಎರಡು ಸೇರಿದಾಗ ಮಾತ್ರ ಯಾವುದೇ ಕಾರ್ಯ ಸಾರ್ಥಕತವಾಗಲು ಸಾಧ್ಯ ಆ ನಿಟ್ಟಿನಲ್ಲಿ ಹರಿದ್ವರ್ಣ ಕನ್ನಡ ಕಿರುಚಿತ್ರ ತಂಡ ಒಂದೊಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರಕೃತಿಯ ಉಳಿವಿನತ್ತ ಶ್ರಮಿಸುತ್ತಿದೆ ಎಂದರು.
ಯುವವಾಹಿನಿಯ ಪ್ರಶಾಂತ್ ಎನ್ ಎಸ್ ಅವರು ತಮ್ಮ ಹುಟ್ಟುಹಬ್ಬಕ್ಕೆ ಗಿಡ ನೆಟ್ಟ ಸವಿನೆನಪನ್ನು ಹಂಚಿಕೊಂಡರು. ಶ್ರದ್ಧಾ ಕೇಶವ ರಾಮಕುಂಜ ಅವರು ಮಾತನಾಡಿ ಜ್ಞಾನ ಸುಧಾ ವಿದ್ಯಾಲಯ ಅನೇಕ ಸರಕಾರದ ಯೋಜನೆಯ ಜತೆಗೆ ಉದ್ಯೋಗ ಸೃಷ್ಟಿಸುವಲ್ಲಿ ಶ್ರಮಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಗಂಗಾಧರ ಕಡಬ, ಕೇಶವ ರಾಮಕುಂಜ, ಡಾ.ಪ್ರಸಾದ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.










