





ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರ್ ಇಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನರಿಮೊಗರು ಸಾಂದೀಪನಿ ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.



ಗುರು ಕಿರಣ್ 10ನೇ ತರಗತಿ -ಜಾವಲಿನ್ ಎಸೆತ ತೃತೀಯ,400 ಮೀ ಓಟ ದ್ವಿತೀಯ,4*400 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಯತೀರಾಜ್ 10ನೇ ತರಗತಿ-ತ್ರಿಪಲ್ ಜಂಪ್ ದ್ವಿತೀಯ, 4*400 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ತುಷಾರ್ 10ನೇ ತರಗತಿ-4*400 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ದರ್ಶನ್ 10ನೇ ತರಗತಿ-4*400ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆರ್ಯನ್ ಕುಮಾರ್ 8ನೇ ತರಗತಿ-ಡಿಸ್ಕಸ್ ಎಸೆತದಲ್ಲಿ ದ್ವಿತೀಯ,ಶಾಟ್ ಪುಟ್ ನಲ್ಲಿ ಪ್ರಥಮ,4*100 ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಲೇಖನ್ 8ನೇ ತರಗತಿ-4*100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಭಿನ್ 8 ನೇ ತರಗತಿ-ಹೈ ಜಂಪ್ ನಲ್ಲಿ ಪ್ರಥಮ,400ಮೀ ಓಟ ದ್ವಿತೀಯ, 4*100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿಷ್ಣುಜಿತ್ 7ನೇ ತರಗತಿ-4*100 ರಿಲೇ ಪ್ರಥಮ ಸ್ಥಾನ, ಆಯುಷ್ 7ನೇ ತರಗತಿ-ಲಾಂಗ್ ಜಂಪ್ ತೃತೀಯ,ಆನ್ಯ 8ನೇ ತರಗತಿ-100 ಮಿ ಓಟ ತೃತೀಯ ,200 ಮಿ ಓಟ ದ್ವಿತೀಯ ಸ್ಥಾನ, ಹಸ್ತಾ ಶೆಟ್ಟಿ 9ನೇ ತರಗತಿ-ಹೈ ಜಂಪ್ ಪ್ರಥಮ,ತ್ರಿಪಲ್ ಜಂಪ್ ಪ್ರಥಮ,4*400 ರಿಲೇ ದ್ವಿತೀಯ ಸ್ಥಾನ, ಸಾನ್ವಿಕಾ 9ನೇ ತರಗತಿ-ಜಾವಲಿನ್ ತ್ರೋ ದ್ವಿತೀಯ, ಡಿಸ್ಕಸ್ ತ್ರೋ ತೃತೀಯ,ಶಾಟ್ ಪುಟ್ ದ್ವಿತೀಯ ಸ್ಥಾನ, ಅರ್ಪಿತಾ 9ನೇ ತರಗತಿ-ಲಾಂಗ್ ಜಂಪ್ ತೃತೀಯ, 4*400 ರಿಲೇ ದ್ವಿತೀಯ,ಗೌತಮಿ 9ನೇ ತರಗತಿ-4*400 ರಿಲೇ ದ್ವಿತೀಯ ಸ್ಥಾನ, ಅಂಜನಾ 8ನೇ ತರಗತಿ-ಶಾಟ್ ಪುಟ್ ದ್ವಿತೀಯ, ಬಿಂದು 10ನೇ ತರಗತಿ-4*400 ರಿಲೇ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.






ಹಾಗೂ ಎಲ್ಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಕೆ ಅಭಿನಂದನೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಜಯ ಚಂದ್ರ ಹಾಗೂ ಸುದೀಕ್ಷ ರವರು ತರಬೇತಿ ನೀಡುತ್ತಿದ್ದಾರೆ.










