





ಪುತ್ತೂರು: ಕೃಷಿ ಅಧ್ಯಯನ ನಿಮಿತ್ತ ಕರ್ನಾಟಕ ರಾಜ್ಯ ಕೃಷಿಕ ಸಮಾಜದ ವತಿಯಿಂದ ಅ.27ರಂದು ವಿಯೆಟ್ನಾಂ, ಮಲೇಷ್ಯಾ ಪ್ರವಾಸ ಕೈಗೊಳ್ಳಲಿರುವ ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರಿಗೆ ಅ.26 ರಂದು ಕೆದಂಬಾಡಿ ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಠಾರದಲ್ಲಿ ಹಾಲು ಉತ್ಪಾದಕರು ಶುಭಾಶಂಸನೆ ಮೂಲಕ ಅಭಿನಂದಿಸಿ ಬೀಳ್ಕೊಟ್ಟರು.



ಶುಭಾಸಂಸನೆ ಮಾಡಿದ ಪುತ್ತೂರು ತಾಲೂಕು ಕೃಷಿಕ ಸಮಾಜದ ಸದಸ್ಯರೂ ಆದ ಕಡಮಜಲು ಸುಭಾಸ್ ರೈಯವರು ಮಾತನಾಡಿ ಕೆದಂಬಾಡಿ ಗ್ರಾಮದ ಕೃಷಿಕ ಹಾಗೂ ಹಾಲು ಉತ್ಪಾದಕರೋರ್ವರು ವಿದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿರುವುದು ನಮ್ಮ ಗ್ರಾಮದ ಹೆಮ್ಮೆಯ ವಿಚಾರ ಎಂದು ಹೇಳಿ ಶುಭ ಹಾರೈಸಿದರು. ವಿಜಯ ಕುಮಾರ್ ರೈರವರಿಗೆ ʻಸುದ್ದಿ ಬಿಡುಗಡೆʼ ಹೊರ ತಂದ ದೀಪಾವಳಿ ವಿಶೇಷಾಂಕವನ್ನು ಕಡಮಜಲುರವರು ನೀಡಿದರು.





ಈ ವೇಳೆ ಕೆದಂಬಾಡಿ ಶ್ರೀರಾಮ ಮಂದಿರದ ಮಾಜಿ ಅಧ್ಯಕ್ಷ ಕರುಣಾಕರ ರೈ ಅತ್ರೆಜಾಲು, ಕೆದಂಬಾಡಿ ಕೆಯ್ಯೂರು ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಶಿವರಾಮ ಗೌಡ ಇದ್ಯಪೆ, ಕೆದಂಬಾಡಿ ಗ್ರಾ.ಪಂ. ಸದಸ್ಯ ಕೃಷ್ಣಕುಮಾರ್ ಇದ್ಯಪೆ, ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಕಾರ್ಯದರ್ಶಿ ಯಶೋಧರ ಚೌಟ ಕೋರಂಗ, ರಾಜೀವ ರೈ ಕೋರಂಗ, ಕರುಣಾಕರ ರೈ ಕೋರಂಗ, ನೇಮಣ್ಣ ಗೌಡ ಇದ್ಯಪೆ, ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಎಂ. ಅಮಿತಾ ವಿ. ರೈ, ಸಹಾಯಕಿ ಪುಷ್ಪಾ ಕೋಡಿಯಡ್ಕ ಮತ್ತಿರರು ಉಪಸ್ಥಿತರಿದ್ದರು.










