




ಪುತ್ತೂರು: ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾದ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾಸಮ್ಮೇಳನವು ಕಾಸರಗೋಡು ಕುನಿಯ ಎಂಬಲ್ಲಿ 2026 ರ ಫೆ.4 ರಿಂದ 8 ರ ತನಕ ನಡೆಯಲಿದ್ದು, ಇದರ ಅಂಗವಾಗಿ ನಡೆಯುವ ಶತಾಬ್ದಿ ಸಂದೇಶ ಜಾಥಾ ಮತ್ತು ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭ ಹಾಗು ಅಂತರಾಷ್ಟ್ರೀಯ ಮಹಾಸಮ್ಮೇಳನದ ಪ್ರಚಾರಾರ್ಥ ಡಿ.14ರಂದು ಮಧ್ಯಾಹ್ನ ಪುತ್ತೂರು ಬದ್ರಿಯಾ ಮಸೀದಿ ವಠಾರದಲ್ಲಿ ಉಲಮಾ ಉಮರಾ ಸಂಗಮ ಹಾಗು ಸಮಸ್ತ ಆದರ್ಶ ಮಹಾ ಸಮ್ಮೇಳನವು ನಡೆಯಲಿದೆ ಎಂದು ಜಂಇಯ್ಯತ್ತುಲ್ ಖುತಬಾ ದಕ್ಷುಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.



ಮಧ್ಯಾಹ್ನ ಮಹೂಂ ಶೈಖುನಾ ಉಸ್ತಾದ್ ವೇದಿಕೆಯಲ್ಲಿ ಉಲಮಾ-ಉಮರಾ ಸಂಗಮ ನಡೆಯಲಿದ್ದು, ಅಹ್ಮದ್ ಪೂಕೋಯ ತಂಙಳ್ ಅದ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ತೋಡಾರು ಉದ್ಘಾಟನೆ ಮಾಡಲಿದ್ದು, ಮೊಹಲ್ಲಾ ಸಬಲೀಕರಣ ಎಂಬ ವಿಷಯದಲ್ಲಿ ಯುವ ವಿದ್ವಾಂಸ ಸುಹೈಲ್ ದಾರಿಮಿ ಅಲ್ ಹೈತಮಿ ಪಳ್ಳಿಕ್ಕರ ವಿಷಯ ಮಂಡಿಸಲಿದ್ದಾರೆ.





ಸಂಜೆ ಸಮಸ್ತ ಆದರ್ಶ ಮಹಾ ಸಮ್ಮೇಳನವು ಮುಹೂಂ ಪುತ್ತೂರು ತಂಙಳ್ ವೇದಿಕೆಯಲ್ಲಿ ನಡೆಯಲಿದೆ. ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು ಅಧ್ಯಕ್ಷತೆ ವಹಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿರುವ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಎಸ್.ಕೆ.ಎಸ್‌ಎಸ್‌ಎಫ್ ಕೇಂದ್ರ ಸಮಿತಿ ನಾಯಕ ಸತ್ತಾರ್ ಪಂದಲ್ಲೂರ್ ಮುಖ್ಯ ಭಾಷಣ ಮಾಡಲಿದ್ದಾರೆ.
ಸಮ್ಮೆಳನದಲ್ಲಿ ಸುಮಾರು ನೂರರಷ್ಟು ಮೊಹಲ್ಲಾದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ತಾಲೂಕು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಉಪಾಧ್ಯಕ್ಷ ಉಮರ್ ದಾರಿಮಿ ಸಾಲ್ಮರ, ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್‌ನ ಅಧ್ಯಕ್ಷ ಶಂಸುದ್ದೀನ್ ದಾರಿಮಿ ಎಸ್.ಕೆ.ಎಸ್.ಎಸ್.ಎಫ್ ಪುತ್ತೂರು ವಲಯದ ಅಧ್ಯಕ್ಷ ಬಾತಿಷಾ ಹಾಜಿ ಪಾಟ್ರಕೋಡಿ ಅವರು ಉಪಸ್ಥಿತರಿದ್ದರು.









