





ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾವು ಘಟಕದಿಂದ ಡಾ.ಶ್ರೀಕುಮಾರ್ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಿದರು.


ಕಳೆದ ಒಂದೂವರೆ ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ 8 ನೇ ತರಗತಿಯ ವಿದ್ಯಾರ್ಥಿಯು ಅನೇಕ ವೈದ್ಯರ ಚಿಕಿತ್ಸೆಯ ನಂತರವೂ ಚೇತರಿಸಿಕೊಳ್ಳದೇ ಅವನ ವಿದ್ಯಾಭ್ಯಾಸವನ್ನೇ ಅರ್ಧದಲ್ಲಿ ನಿಲ್ಲಿಸುವ ಪರಿಸ್ಥಿತಿಯಲ್ಲಿ ಪೋಷಕರೂ ಕಂಗಾಲಾಗಿದ್ದರು. ಈ ವಿಚಾರವನ್ನು ಅರಿತ ಕತ್ರಿಬೈಲ್ ಡಾ.ಶ್ರೀಕುಮಾರ್ ಅವರು ಮತ್ತು ಮಂಗಳೂರಿನ ಸರ್ಜನ್ ಡಾ.ರಾಜೇಶ್ ಬಲ್ಲಾಳ್ ಈ ಖಾಯಿಲೆಯನ್ನು ಸವಾಲಾಗಿ ಸ್ವೀಕರಿಸಿ ಕೇವಲ 15 ದಿನದಲ್ಲಿ ವಿದ್ಯಾರ್ಥಿಯ ಹೊಟ್ಟೆನೋವು ಸಂಪೂರ್ಣವಾಗಿ ಗುಣವಾಗಿ ಆ ಪ್ರತಿಭಾವಂತ ವಿದ್ಯಾರ್ಥಿಯ ಬದುಕಿಗೆ ಬೆಳಕಾದ ಸಲುವಾಗಿ ಇಬ್ಬರು ವೈದ್ಯರ ಈ ಸೇವೆಯನ್ನು ಮನಗಂಡು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾವು ಘಟಕದಿಂದ ಸನ್ಮಾನಿಸಲಾಗಿದೆ.





ಈ ಸಂಧರ್ಭದಲ್ಲಿ ಪುತ್ತಿಲ ಪರಿವಾರ ಕಾವು ಘಟಕದ ಅಧ್ಯಕ್ಷರಾದ ಹರೀಶ್ ಕುಂಜತ್ತಾಯ,ಪದಾಧಿಕಾರಿಗಳಾದ ಯೋಗೀಶ್ ಕಾವು,ರವಿಪ್ರಸಾದ್ ರೈ ಕಾವು,ಸುದೀಂದ್ರ ಕಾವು,ಅಮೃತಲಿಂಗಂ ಕಾವು,ನಿರಂಜನ್ ರಾವ್ ಕಾವು ಮತ್ತು ಚಿದಾನಂದ ಆಚಾರ್ಯ ಕಾವು ಉಪಸ್ಥಿತರಿದ್ದರು.




