





ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ತಾಲೂಕಿನ ಮುಡಿಪು ವಲಯದಲ್ಲಿ ಹೆಗ್ಗಡೆಯವರ 58 ನೇ ಪಟ್ಟಭಿಷೇಕದ ವರ್ಧಂತ್ಸುತ್ಸವ ಪ್ರಯುಕ್ತ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ದೇರಳಕಟ್ಟೆ ,ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಮುಡಿಪು ವಲಯ ಮತ್ತು ಶ್ರೀ ಭಾರತಿ ಹಿರಿಯ ಪ್ರಾಥಾಮಿಕ ಶಾಲೆ ಮುಡಿಪು ಇದರ ಸಹಕಾರದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ ನಡೆಯಿತು.


ಪಂಚಾಯತ್ ಅಧ್ಯಕ್ಷೆ ಪ್ರೇಮ ಗಟ್ಟಿಯವರು ಸಭಾಧ್ಯಕ್ಷತೆ ವಹಿಸಿದ್ದರು. ಸಂತೋಷ್ ಕುಮಾರ್ ರೈ ಬೋಳಿಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದ ಮೂಲಕ ನಡೆಸುವ ಸಾಮಾಜಿಕ ಕಾರ್ಯಕ್ರಮಗಳು ಇಂದು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದೆ ಎಂದು ತಿಳಿಸಿದರು.





ತಾಲೂಕು ಯೋಜನಾಧಿಕಾರಿ ಸುರೇಶ್ರವರು ಅರೋಗ್ಯ ತಪಾಸಣಾ ಶಿಬಿರ ನಡೆಸುವ ಉದ್ದೇಶ ಹಾಗೂ ಇದರ ಪ್ರಯೋಜನಗಳ ಬಗ್ಗೆ, ಯೋಜನೆಯ ಮೂಲಕ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಡಾ| ಆಫಸಲ್ ರವರು ಅರೋಗ್ಯ ತಪಾಸಣಾ ಶಿಬಿರಾದ ಸದುಪಯೋಗ ಪಡೆಯಲು ತಿಳಿಸಿ ಇತ್ತಿಚಿನ ದಿನಗಳಲ್ಲಿ ಅರೋಗ್ಯ ಸಮಸ್ಯೆ ಅತಿ ಹೆಚ್ಚು ಕಂಡು ಬರುತಿದ್ದು ಇದಕ್ಕೆ ತಪಾಸಣೆ ಅವಶ್ಯಕತೆ ಇದೆ ಎಂದು ತಿಳಿಸಿದರು. ಮುಡಿಪು ಶಾಲೆಯ ಸಂಚಾಲಕ ಸುಬ್ರಮಣ್ಯ ಭಟ್ , ಪ್ರಗತಿಬಂಧು ಅಧ್ಯಕ್ಷ ನವೀನ್ ಚಂದ್ರ , ಜನಜಾಗೃತಿ ಸಮಿತಿ ಸದಸ್ಯ ನವೀನ್ ಪಾದಲ್ಪಡಿರವರುಗಳು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಸೇವಾಪ್ರತಿನಿಧಿ ಶಕೀಲಾ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷ ವಿನೋದ್ ಬಂಗೇರ ಪಜೀರ್ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಪ್ರೇಮಲತಾ ವಂದಿಸಿದರು.










