





ಪುತ್ತೂರು: ದರ್ಬೆ ರಿಲಯನ್ಸ್ ಡಿಜಿಟಲ್ಸ್ ಬಳಿ ಹೆರಿಟೇಜ್ ಫಿಶ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಅ.31 ರಂದು ಶುಭಾರಂಭಗೊಳ್ಳಲಿದೆ.


ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರೂ, ಸಹಕಾರ ರತ್ನ ಸವಣೂರು ಸೀತಾರಾಮ ರೈರವರು ನೂತನ ರೆಸ್ಟೋರೆಂಟ್ ಅನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ಉದ್ಯಮಿ ಶಿವರಾಮ ಆಳ್ವ ಬಳ್ಜಲುಗುತ್ತು, ಹೋಟೆಲ್ ದಿನೇಶ ಭವನದ ಮಾಲಕ ಕುಂಬ್ಳೆ ಗಿರಿಧರ್ ಶೆಣೈ, ಉದ್ಯಮಿ ಎಂ.ಸತೀಶ್ ಕಾಮತ್, ಉದ್ಯಮಿ ಪ್ರಜ್ವಲ್ ರೈ ಪಾತಾಜೆರವರು ಭಾಗವಹಿಸಲಿದ್ದಾರೆ.





ಹೊಟೇಲ್ ನಲ್ಲಿ ಬೆಳಿಗ್ಗೆ ಚಾ. ಕಾಫಿ ಹಾಗೂ ಸಾಂಪ್ರದಾಯಿಕ ತಿಂಡಿ-ತಿನಸುಗಳ ಉಪಹಾರ, ಬಾಳೆ ಎಲೆಯಲ್ಲಿ ವಿವಿಧ ಮೀನು ಖಾದ್ಯಗಳ ಹಾಗೂ ಬಿರಿಯಾನಿ ಊಟ, ಫ್ರೆಶ್ ಜ್ಯೂಸ್, ಶವರ್ಮಾ ಮತ್ತು ಟಿಕ್ಕ ಇತ್ಯಾದಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಭ್ಯವಾಗಲಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಹೊಟೇಲ್ ಪಾಲುದಾರರಾದ ಮಧುಸೂದನ್ ಶೆಣೈ, ಹರೀಶ್ ಪೂಜಾರಿ, ಅರ್ಜುನ್ ಕಾಮತ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







