





ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಅ.29ರಂದು ಆಯೋಜಿಸಿದ್ದ ಮಂಗಳೂರಿನ ಕಪಿತಾನಿಯೋ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಸುದಾನ ಪ್ರೌಢ ಶಾಲೆಯ ಅದ್ವಿಜ್ ಸಜೇಶ್ (10ನೇ) (ಸಜೇಶ್ ಆನಂದ್ ಮತ್ತು ರಜಿತ ಸಜೇಶ್ ರವರ ಪುತ್ರ), ಭಗತ್ ಕೃಷ್ಣ (9ನೇ) (9 ಸತ್ಯ ಕೃಷ್ಣಪ್ಪ ಮತ್ತು ರೂಪ ಕೆ ಎಸ್ ರವರ ಪುತ್ರ), ರಿಷಿಕ್ ಕೆ. ಎಲ್(9ನೇ) (ಲೊಕೇಶ್ ಕೆ ಜೆ ಮತ್ತು ಅಕ್ಷತ ಪಿ ರವರ ಪುತ್ರ) ವಿಜೇತರಾಗಿದ್ದು ಮುಂದೆ ನಡೆಯಲಿರುವ ಮೈಸೂರು ವಿಭಾಗೀಯ ಮಟ್ಟದ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿಜೇತರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅಭಿನಂದಿಸಿ ಶುಭಹಾರೈಸಿದ್ದಾರೆ.
ಇವರಿಗೆ ಶಾಲೆಯ ಕಂಪ್ಯೂಟರ್ ಶಿಕ್ಷಕ ಸುಂದರ್ ನಾವೂರ್ ಮಾರ್ಗದರ್ಶನ ನೀಡಿದ್ದಾರೆ.








