





ಪುತ್ತೂರು : ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್ ಬಪ್ಪಳಿಗೆ ಅವರು ಅ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.


ಪುತ್ತೂರು ಬಪ್ಪಳಿಗೆ ಬಂಗಾರಕಾಯೆರಾ ನಿವಾಸಿಯಾಗಿರುವ ಶ್ರೀಮತಿ ಜಯಂತಿ ಭಾಸ್ಕರ್ ರವರು 1985ರಲ್ಲಿ ಸಂಘಕ್ಕೆ ಲೆಕ್ಕಿಗ ಹುದ್ದೆಗೆ ನೇಮಕಗೊಂಡಿದ್ದರು. ಕಳೆದ 9 ವರ್ಷಗಳಿಂದ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅ.31 ರಂದು ಕರ್ತವ್ಯದಿಂದ ನಿವೃತ್ತರಾಗಲಿದ್ದಾರೆ. ನಿವೃತ್ತರಾಗಲಿರುವ ಶ್ರೀಮತಿ ಜಯಂತಿ ಭಾಸ್ಕರ್ ರವರು ಪತಿ ನಿವೃತ್ತ ಸೈನಿಕ ಭಾಸ್ಕರ್ ಬಿ, ಓರ್ವ ಪುತ್ರ, ಓರ್ವ ಪುತ್ರಿಯೊಂದಿಗೆ ಬಪ್ಪಳಿಗೆ ಎಂಬಲ್ಲಿ ವಾಸವಾಗಿದ್ದಾರೆ.















