





ಉಪ್ಪಿನಂಗಡಿ : ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗು ಕನ್ನಡ ಕಲರವ -3 ಕಾರ್ಯಕ್ರಮ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭ ಆಡಿಟೋರಿಯಮ್ ನಲ್ಲಿ ಶನಿವಾರದಂದು ನಡೆಯಿತು.



ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷ ಉಮೇಶ್ ನಾಯಕ್ ರವರು ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಹೆಸರಾಂತ ಕವಿಗಳ ಬಗೆಗಿನ ಹಾಡು-ನೃತ್ಯ-ನಾಟಕಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ ಎಂದರು.





ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಡೆಕ್ಕಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ | ಸುಬ್ಬಪ್ಪ ಕೈಕಂಬ ಮಾತನಾಡಿ , ಮಕ್ಕಳಲ್ಲಿ ಕನಸು ಬಿತ್ತಿ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಹೊಸತನದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಹೋಬಳಿ ಘಟಕದ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ಶಾಲಾ ವಿದ್ಯಾರ್ಥಿಗಳಿಂದ ಕವಿ ಜೆ ಪಿ ರಾಜರತ್ನಂ , ಇಂದ್ರಪ್ರಸ್ಥ ಸಮೂಹ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಕವಿ ದಾ ರಾ ಬೇಂದ್ರೆ , ಉಪ್ಪಿನಂಗಡಿ ಶ್ರೀರಾಮ ಶಾಲೆ ವೇದಶಂಕರ ನಗರ ಇಲ್ಲಿನ ವಿದ್ಯಾರ್ಥಿಗಳಿಂದ ಕವಿ ಸಂತ ಶಿಶುನಾಳ ಶರೀಫ , ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಿಂದ ಕವಿ ಕೆ ಎಸ್ ನರಸಿಂಹ ಸ್ವಾಮಿ , ಸರ್ಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಕವಿ ಜಿ ಎಸ್ ಶಿವರುದ್ರಪ್ಪ , ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಿಂದ ಕವಿ ಪು ತಿ ನರಸಿಂಹಾಚಾರ್ಯ , ಸರಕಾರಿ ಹಿ ಪ್ರಾ ಶಾಲೆ 34 ನೇ. ನೆಕ್ಕಿಲಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಕುವೆಂಪು ಕವಿಗಳನಾಧರಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತು.
ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ಕಂಗ್ವೆ ವಿಶ್ವನಾಥ್ ಶೆಟ್ಟಿ, ರೋಟರಿ ಅಧ್ಯಕ್ಷ ಜಾನ್ ಕೆನ್ಯೂಟ್ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ವಿವೇಕಾನಂದ ಪದವಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ| ಹೆಚ್ ಜಿ ಶ್ರೀಧರ್, ಡಾ. ಗೋವಿಂದಪ್ರಸಾದ್ ಕಜೆ, ನವೀನ್ ಬ್ರಾಗ್ಸ್, ರಾಜೇಂದ್ರ ಭಟ್, ಯು ರಾಜೇಶ್ ಪೈ, ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ರವೀಂದ್ರ ಆಚಾರ್ಯ , ರಾಮಚಂದ್ರ ಮಣಿಯಾಣಿ, ಝಕಾರಿಯಾ ಕೊಡಿಪ್ಪಾಡಿ, ಸುಂದರ ಗೌಡ, ಹರೀಶ್ ಶೆಟ್ಟಿ, ಸುಧಾಕರ ಶೆಟ್ಟಿ, ರಮೇಶ್ ಕಜೆ, ಚಂದ್ರಪ್ರಕಾಶ್ ಭಟ್, ಸುನಿಲ್ ಸಂಗಮ್, ಗುಣಕರ ಅಗ್ನಾಡಿ, ವಂದನಾ ಶರತ್, ಸುನಿಲ್ ಕುಮಾರ್ ದದ್ಡು, ಹನುಮಂತಪ್ಪ, ಕೃಷ್ಣವೇಣಿ, ಶಶಿಧರ್ ಶೆಟ್ಟಿ, ಉಷಾ ಮುಳಿಯ, ಕೈಲಾರ್ ರಾಜಗೋಪಾಲ ಭಟ್, ಪ್ರವೀಣ್ ಕುಡುಮಾರ್, ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ವೀಣಾ ಪ್ರಸಾದ್ ಸ್ವಾಗತಿಸಿ , ಅಬ್ದುಲ್ ರಹಿಮಾನ್ ಯೂನಿಕ್ ವಂದಿಸಿದರು. ಭವ್ಯ ಪಿ ಎಸ್ , ಹಾಗೂ ಸುಂದರಿ ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಹಸಿವು ತಣಿಸಿದ ’ಲೈವ್ ಮಸಾಲ್ ದೋಸೆ – ಗೋಳಿಬಜೆ’
ಕನ್ನಡ ಕಲರವ -3 ಕಾರ್ಯಕ್ರಮದಲ್ಲಿ ಕನ್ನಡದ ಹೆಸರಾಂತ ಕವಿಗಳನ್ನಾಧರಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರ ಮನ ಗೆದ್ದರೆ, ಹೋಬಳಿ ಘಟಕದ ಅಧ್ಯಕ್ಷರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ವೈವ್ ಮಸಾಲ ದೋಸೆ ಹಾಗು ಗೋಳಿಬಜೆ ಮತ್ತು ಹಣ್ಣಿನ ರಸದ ಪಾನೀಯದ ಆತಿಥ್ಯ ಹಸಿವನ್ನು ತಣಿಸಿದ್ದು ಮಾತ್ರವಲ್ಲದೆ, ಮೆಚ್ಚುಗೆಯನ್ನೂ ಗಳಿಸಿತ್ತು.









