





ನೆಲ್ಯಾಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡಾ ಇದರ ಎಜಿಎಂ ಅಮಿತ್ ಶೆಟ್ಟಿ ದಂಪತಿ ನ.2ರಂದು ಭೇಟಿ ನೀಡಿದರು.



ಶ್ರೀ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಬ್ಯಾಂಕ್‌ನ ಸಿಎಸ್‌ಆರ್ ಫಂಡ್‌ನಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾ ಇದರ ಶಿಶಿಲ ಶಾಖೆಯ ಮ್ಯಾನೇಜರ್ ಯೋಗೀಶ್ ಉಪಸ್ಥಿತರಿದ್ದರು. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಅಮಿತ್ ಶೆಟ್ಟಿ ಅವರಿಗೆ ಶಾಲು ಹಾಕಿ ಗೌರವಿಸಿದರು.













