





ಪುತ್ತೂರು: ಅತೀ ಕಿರಿಯ ವಯಸ್ಸಿನಲ್ಲಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿ ಜನಪರ ಮತ್ತು ಸಂವಿಧಾನ ಪರವಾಗಿ ಕೆಲಸ ಮಾಡಿ ಜನಪ್ರಿಯತೆ
ಗಳಿಸಿರುವುದರಿಂದ ಈ ಹಿಂದಿನ ಸ್ಪೀಕರ್ ಕಾಗೇರಿಯವರು ಮತ್ತು ಪ್ರತಿಪಕ್ಷಗಳ ಕೆಲವು ಶಾಸಕರು ಮಾಡಿರುವ ಆಧಾರ ರಹಿತ ಆರೋಪ ದುರುದ್ದೇಶ ಪೂರಿತವಾಗಿರುತ್ತದೆ ಮತ್ತು ಪ್ರಚಾರಕ್ಕಾಗಿ ಆರೋಪ ಮಾಡಿದ್ದು ಇದನ್ನು ಖಂಡಿಸುತ್ತೇನೆ ಎಂದು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಹಿಂದಿನ ಸಭಾಪತಿಗಳು ಅಧಿಕಾರ ದುರುಪಯೋಗ, ಸ್ವೇಚಾಚ್ಚಾರ, ಸ್ವಜನ ಪಕ್ಷಪಾತ ಮಾಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ವಿನಃ ಕಾರಣ ಕೋಮು ಭಾವನೆ ಕೆರಳಿಸಿ ಮತ ಗಳಿಸುವ ಉದ್ದೇಶ ಮಾತ್ರ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿ ಖಾದರ್ ಅವರು ಎಲ್ಲಾ ಜಾತಿ ಧರ್ಮ ಪಕ್ಷದವರನ್ನು ಒಂದೇ ಭಾವನೆಯಲ್ಲಿ ನೋಡುತ್ತಿದ್ದು, ಅವರನ್ನು ನೋಡಿ ಮಾದರಿಯಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ವಿಶ್ವೇಶರ ಹೆಗಡೆ ಕಾಗೇರಿ ಮತ್ತು ಎಸ್. ಆರ್ ಭೋಪಯ್ಯ ಅವರ ಅವಧಿಯಲ್ಲಿ ಆದ ಹಣಕಾಸಿನ ಬಿಡುಗಡೆ ಬಗ್ಗೆ ತನಿಖೆಗೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.





ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಯು. ಟಿ. ಖಾದರ್ ರವರು ಜಾತಿ, ಮತ, ಪಕ್ಷ, ಪಂಥ ಯಾವುದೇ ಭೇದವಿಲ್ಲದೆ ಸಾoಧಾನಿಕ ಹುದ್ದೆಯಲ್ಲಿ ಇದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರತೀ ಬಾರಿ ಅಧಿವೇಶನ ದ ಸಂದರ್ಭದಲ್ಲಿ ಹೊಸತನ ವನ್ನು ತಂದು ಎಲ್ಲಾ ಪಕ್ಷದ ಶಾಸಕರುಗಳಿಂದ ಪ್ರಶಂಸಿಸಲ್ಪಡುತ್ತಾರೆ, ಇದನ್ನು ಸಹಿಸದೆ ಆರೋಪಿಸುವುದು ದುರದೃಷ್ಟ ಕರ ಎಂದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಮಾತನಾಡಿ ಬೆಳಗಾವಿ ಸುವರ್ಣ ಸೌಧದಲ್ಲಿ ಬಸವಣ್ಣ ನವರ ಅನುಭವ ಮಂಟಪ, ಖ್ಯಾತ ಉದ್ಯಮಿಗಳನ್ನು, ವಿಶೇಷ ಸಾಧಕರನ್ನು, ಕಟ್ಟಕಡೆಯ ಬೀದಿ ವ್ಯಾಪಾರ ಮಾಡಿ ಮಕ್ಕಳನ್ನು ಸಮಾಜದ ಗಣ್ಯರನ್ನಾಗಿಸಿದ ಮಹಾನುಭಾವರನ್ನು ಸದನಕ್ಕೆ ಪರಿಚಯಿಸಿ ಪ್ರತಿಪಕ್ಷ, ಆಡಳಿತ ಪಕ್ಷದ ನಾಯಕರುಗಳಿಂದ ಭೇಷ್ ಎನಿಸಿಕೊಂಡ ಸ್ಪೀಕರ್ ರವರು ದಾಖಲೆಯ ವಿದ್ಯಾರ್ಥಿಗಳು ಅಧಿವೇಶನ ಕಲಾಪ ವೀಕ್ಷಿಸಿ ಮಾದರಿ ವಿದ್ಯಾರ್ಥಿ ಸಂಸತ್ತು ಮೂಲಕ ಶಾಲೆಗಳಲ್ಲಿ ಪ್ರಜಾ ಪ್ರಭುತ್ವದ ಸೌಂದರ್ಯ ವನ್ನು ಹೆಚ್ಚಿಸಿದ ಕೀರ್ತಿಗೆ ಪಾತ್ರ ರಾಗಿದ್ದಾರೆ ಇದೆಲ್ಲವೂ ಇತಿಹಾಸ ಎಂದರು. ಸುಳ್ಯ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೊಳ್ಳುರು ಮಾತನಾಡಿ ಖಾದರ್ ಅವರ ಸೇವೆ ಮತ್ತು ನಡವಳಿಕೆಗಳು ಮಾದರಿಯಾಗಿದ್ದಾರೆ ಎಲ್ಲಾ ಪಕ್ಷದವರನ್ನು ಗೌರವಿಸುತ್ತಾರೆ ಕ್ಷುಲ್ಲಕ ಆರೋಪ ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೋ, ಭಾಸ್ಕರ ಪೂಜಾರಿ ಕೊಯಿಕುಳಿ,ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.









