ಉಪ್ಪಿನಂಗಡಿ ಸರಕಾರಿ ಪ್ರ.ದರ್ಜೆ ಕಾಲೇಜಿನಲ್ಲಿ “ಉರಿದೊಡಲ ಮಡಿಲ ಕಥೆಗಾರ ಮೊಗಳ್ಳಿ  ಗಣೇಶ್” ಕುರಿತು ವಿಶೇಷ ಉಪನ್ಯಾಸ

0

ಪುತ್ತೂರು: ಶೋಷಿತ ಬದುಕಿನ ವಿವಿಧ ಉರಿದೊಡಲುಗಳ ಮಗ್ಗಲುಗಳನ್ನು ಅತ್ಯಂತ ಸೃಜನಶೀಲವಾಗಿ ತಮ್ಮ ಕಥೆಗಳ ಮೂಲಕ ಸಂವೇದಿಸಿದ ಅಪರೂಪದ ಕಥೆಗಾರ ಮೊಗಳ್ಳಿ  ಗಣೇಶ್ ಎಂದು ಉಪನ್ಯಾಸಕ ಕೆ ಸಿ ಲೋಹಿತ್ ಕುಮಾರ್ ಅವರು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಕಾರ್ಯಕ್ರಮ  ಜರುಗಿತು. ತಮ್ಮ ಕಥೆಗಳ ಮೂಲಕ ದಲಿತ ಬದುಕಿನ ಬಡತನ, ಅಪಮಾನ ಹಿಂಸೆ,ಜಾತಿ ಸಂಬಂಧಿತ ತಲ್ಲಣ, ವಿಪ್ಲವಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮೊಗಳ್ಳಿ ಶೋಧಿಸಿದ್ದಾರೆ ಎಂದು ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ವಿವರಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಸ್ವಾಗತಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಹಿತ್ ಕೆ ಸಿ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ರವಿರಾಜ್ ಎಸ್ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕರಾದ ಡಾ. ಎಸ್ ಹರಿಪ್ರಸಾದ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ  ಸುಜಿತ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಟರಾಜ್ ಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here