





ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನ.5ರಂದು ವಿಜ್ರಂಭಣೆಯಿಂದ ಲಕ್ಷದೀಪೋತ್ಸವ ನಡೆಯಲಿದೆ.


ಅಂದು ಬೆಳಿಗ್ಗೆ ಗಂಟೆ 9ಕ್ಕೆ ಲಕ್ಷದೀಪೋತ್ಸವದ ಅಂಗವಾಗಿ 6 ತೆಂಗಿನಕಾಯಿಯ ಗಣಪತಿ ಹೋಮ, ಮಧ್ಯಾಹ್ನ 12 ಗಂಟೆಗೆ ಶ್ರೀ ಜನಾರ್ದನ ದೇವರಿಗೆ ಕಲಶಪೂಜೆ, ನವಕ ಕಲಶಾಭಿಷೇಕ, ಜನಾರ್ದನ ದೇವರ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.






ಸಾಯಂಕಾಲ ಗಂಟೆ 7 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಹಾಗೂ ಶ್ರೀ ಜನಾರ್ದನ ದೇವರಿಗೆ ರಂಗಪೂಜೆ ನಡೆದ ಬಳಿಕ ದೀಪೋತ್ಸವಕ್ಕೆ ಆರಂಭಗೊಳ್ಳಲಿದೆ. ಬಳಿಕ ಶ್ರೀ ಜನಾರ್ದನ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ ನಡೆಯಲಿದೆ. ರಂಗಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ಪ್ರಾರಂಭಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







