





ಪುತ್ತೂರು: ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಇದರ ಮಡಿಕೇರಿ ಶಾಖೆಯು ಸ್ಥಳಾಂತರಗೊಂಡು ಮಡಿಕೇರಿಯ ಚೆನ್ನರಾಯಪಟ್ಟಣದ ಕೂರ್ಗ್ ಸರ್ವಿಸ್ ಸ್ಟೇಷನ್ ಹತ್ತಿರ, ರೇಸ್ ಕೋರ್ಸ್ ರೋಡ್ ನಲ್ಲಿ ಉದ್ಘಾಟನೆಗೊಂಡಿತು.



ಸೋಮವಾರಪೇಟೆ ಮುನ್ಸಿಪಾಲ್ ನ ಮಾಜಿ ಕೌನ್ಸಿಲರ್, ಕೊಡಗು ಜಿಲ್ಲಾ ವಾಣಿಜ್ಯ ಸಂಘದ ನಿರ್ದೇಶಕ ಏ. ಪಿ.ವೀರರಾಜ್ ದೀಪ ಬೆಳಗಿಸಿ ಶುಭ ಹಾರೈಸಿದರು.





ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೋಘ ಜೆ ರೈ ಸಂಸ್ಥೆಯ ಬಗ್ಗೆ ಮಾತನಾಡಿ ಮಡಿಕೇರಿ ಶಾಖೆಯೂ 2013 ರಲ್ಲಿ ಪ್ರಾರಂಭ ಗೊಂಡಿದ್ದು ಈಗ ಗ್ರಾಹಕರಿಗೆ ಇನ್ನಷ್ಟು ಹೆಚ್ಚು ಸೇವೆಯನ್ನು ಒದಗಿಸುವ ಉದ್ದೇಶದಿಂದ ಸ್ಥಳಾಂತರಗೊಂಡಿದೆ. ಈಗಾಗಲೇ ಕರ್ನಾಟಕದಾದ್ಯಂತ 20 ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಅತೀ ಶೀಘ್ರದಲ್ಲಿ ಹೊಸ ವಾಹನ ಖರೀದಿ ಸಾಲ, ಸೆಕೆಂಡ್ ಹ್ಯಾಂಡ್ ವಾಹನ ಸಾಲ ನೀಡುವುದರ ಜೊತೆಗೆ ದ್ವಿಚಕ್ರ ವಾಹನ ಸಾಲ, ಭೂ ಅಡಮಾನ ಸಾಲ, ಚಿನ್ನ ಅಡಮಾನ ಸಾಲ, ವ್ಯವಹಾರ ಸಾಲವನ್ನು ನೀಡುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ ಎಂದರು.
ಖ್ಯಾತ ಪಾನಿಯ ಬ್ಯ್ರಾಂಡ್ ಬಿಂದು ಮಾಲಕತ್ವ ಹೊಂದಿರುವ ಎಸ್.ಜಿ. ಗ್ರೂಪ್ ನ ಅಂಗಸಂಸ್ಥೆಯಾಗಿರುವ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 1994 ರಲ್ಲಿ ಸ್ಥಾಪನೆಯಾಗಿದ್ದು ಮಂಗಳೂರಿನಲ್ಲಿ ನೋಂದಾಯಿತ ಕಛೇರಿಯನ್ನು ಹೊಂದಿದೆ. ಮ್ಯಾನೇಜಿಂಗ್ ಡೈರೆಕ್ಟರ್ ಸತ್ಯಶಂಕರ್ ಕೆ ಹಾಗೂ ಎಕ್ಸಿಕ್ಯೂಟಿವ್ ನಿರ್ದೇಶಕರಾದ ರಂಜಿತಾ ಶಂಕರ್ ಇವರ ಆಶಯದಂತೆ ಗ್ರಾಹಕರಿಗೆ ಉತ್ತಮ ಪಾರದರ್ಶಕ ಸೇವೆಯನ್ನು ನೀಡುತ್ತಾ ಅನೇಕ ಕುಟುಂಬಗಳು ಸ್ವಾವಲಂಬಿಯನ್ನಾಗಿಸಿದೆ ಎಂದು ತಿಳಿಸಿದರು.
ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀವಸ್ತರಾಜ್ ಎಮ್ ಜಿ, ಸೀನಿಯರ್ ರಿಕವರಿ ಮ್ಯಾನೇಜರ್ ಕೇಶವ್ ಹೆಚ್, ಪ್ರಾದೇಶಿಕ ವ್ಯವಸ್ಥಾಪಕರಾದ ಲೋಕೇಶ್, ಶಾಖಾ ವ್ಯವಸ್ಥಾಪಕರಾದ ಬೋಪಣ್ಣ, ಬಿ.ಹೆಚ್.ಎ ಟ್ರೇಡರ್ಸ್ ನ ಸಾದಿಕ್ ಅಲಿ, ಕಟ್ಟಡ ದ ಮಾಲಕರಾದ ಶರಫ್, ಗ್ರಾಹಕರಾದ ಬೆಳ್ಯಪ್ಪ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.









