ಕೊಳ್ತಿಗೆ -ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದಿಂದ ಸಿದ್ದಮೂಲೆ ,ನೆಟ್ಟಾರಿನಲ್ಲಿ ಅಳವಡಿಸಿದ ದಾರಿ ಸೂಚನ ನಾಮಫಲಕ ಅನಾವರಣ

0

ಪುತ್ತೂರು : ಕೊಳ್ತಿಗೆ- ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ನೆಟ್ಟಾರು, ಸಿದ್ದಮೂಲೆಯಲ್ಲಿ ಅಳವಡಿಸಿದ ದಾರಿ ಸೂಚಕ ನಾಮ ಫಲಕಗಳನ್ನು ಅನಾವರಣಗೊಳಿಸಲಾಯಿತು.

ಸಿದ್ದಮೂಲೆಯಲ್ಲಿ ಅಳವಡಿಸಿದ ನಾಮಫಲಕವನ್ನು ಅನಾವರಣ ಮಾಡಿ ಮಾತನಾಡಿದ ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್,ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘವು ಹಲವು ಜನಪಯೋಗಿ ಕಾರ್ಯಗಳನ್ನು ಸಂಘಟಿಸುತ್ತಿದ್ದು,ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ.ಸಿದ್ದಮೂಲೆಯಲ್ಲಿ ದಾರಿ ಸೂಚಕ ಫಲಕದ ಅಗತ್ಯತೆ ಇತ್ತು.ಅದನ್ನು  ಈಡೇರಿಸಿದ ಮರಾಟಿ ಸಮಾಜ ಸೇವಾ ಸಂಘದ ಕಾರ್ಯ ಅಭಿನಂದನಾರ್ಹ.ಮುಂದಿನ ದಿನಗಳಲ್ಲಿ ಸಿದ್ದಮೂಲೆ ಜಂಕ್ಷನ್ ನಲ್ಲಿ ಗ್ರಾ.ಪಂ.ವತಿಯಿಂದ ಸೋಲಾರ್ ಬೀದಿ ದೀಪ ಅಳವಡಿಸಲಾಗುವುದು ಎಂದರು.

ಮಾಲೆತ್ತೋಡಿ ಶಾಲಾ ಮುಖ್ಯಶಿಕ್ಷಕ ತಿಮ್ಮಪ್ಪ ಕೊಡ್ಲಾಡಿ ಮಾತನಾಡಿ,ಸಿದ್ದಮೂಲೆಯಲ್ಲಿ ದಾರಿ ಸೂಚಕ ಫಲಕ ಅಳವಡಿಸಿದ್ದು ಮಾಲೆತ್ತೋಡಿ ಶಾಲೆಗೆ ಬರುವವರಿಗೆ ಅನುಕೂಲವಾಗಿದೆ ಎಂದು ಹೇಳಿ ಸಂಘದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ನೆಟ್ಟಾರಿನಲ್ಲಿ ಅಳವಡಿಸಿದ ದಾರಿ ಸೂಚಕ ಫಲಕ ಅನಾವರಣ ಮಾಡಿದ ಕೊಳ್ತಿಗೆ ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ  ವೆಂಕಪ್ಪ ನಾಯ್ಕ ಕಣ್ಣಕಜೆ ಮಾತನಾಡಿ, ಸಂಘದ ವತಿಯಿಂದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಎಲ್ಲರ ಸಹಕಾರ ಅಗತ್ಯ. ಕೊಳ್ತಿಗೆ ಮರಾಟಿ ಸಮಾಜ ಸಂಘವು ಮಾದರಿಯಾಗಿ ಗುರುತಿಸುವಂತಾಗಲು ಎಲ್ಲರ ಸಹಕಾರ ಅಗತ್ಯ ಎಂದರು.

ಸವಣೂರು ಗ್ರಾ.ಪಂ.ಸದಸ್ಯ ಭರತ್ ರೈ ಕಲಾಯಿ ಮಾತನಾಡಿ,ಮರಾಟಿ ಸಮಾಜ ಸೇವಾ ಸಂಘವು ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗದೇ ಇಡೀ ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ.ಮಾಲೆತ್ತೋಡಿ ಶಾಲೆಯಲ್ಲಿ 5 ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ನಡೆಸುತ್ತಿದೆ ಎಂದು ಸಂಘದ ಕಾರ್ಯ ಚಟುವಟಿಕೆಗಳನ್ನು ಅಭಿನಂದಿಸಿದರು.

 ಕೊಳ್ತಿಗೆ ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಬ್ಬಯ್ಯ  ಕೆ.,ಮಾಜಿ ಅಧ್ಯಕ್ಷ ಪದ್ಮನಾಭ ಎಸ್. ಸರಸ್ವತಿಮೂಲೆ,ಕೊಳ್ತಿಗೆ ಗ್ರಾ.ಪಂ.ಸದಸ್ಯೆ ಹಾಗೂ ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಕೆ.,ಕೊಳ್ತಿಗೆ ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಜಗನ್ನಾಥ ಮಾಲೆತ್ತೋಡಿ, ನಿಕಟ ಪೂರ್ವ ಕಾರ್ಯದರ್ಶಿ ಭವಿತ್ ಕುಮಾರ್ ಹಾಗೂ ಸಂಘದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here