





ಪುತ್ತೂರು: ಅಮೆರಿಕದಲ್ಲಿ ಅತ್ಲಾಂಟದ ನೃಪತುಂಗ ಕನ್ನಡ ಕೂಟದ ರಾಜ್ಯೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತಿ ಜಯಪ್ರಕಾಶ್ ಪುತ್ತೂರು ಅವರು ವಿದೇಶಿ ನೆಲದಲ್ಲಿ ಕನ್ನಡಿಗರು ಮಾಡುವ ಸಂಭ್ರಮದ ಸೊಬಗನ್ನು ಬಣ್ಣಿಸಿ, ಮಾತುಗಳನ್ನಾಡಿ ಉದ್ಯೋಗ ನಿಮಿತ್ತ ಬಂದು ಅಲ್ಲಿ ಕೂಡ ಮಾತೃಭಾಷೆ ಬಗ್ಗೆ ಅಭಿಮಾನ ಇರಿಸಿಕೊಂಡು ಬಾಳುವ ಅಭಿಮಾನ ನಿಜವಾದ ಕನ್ನಡ ಪ್ರೀತಿ ಎಂದರು. ದೀಪಾವಳಿ ಹಬ್ಬದ ಅಂಗವಾಗಿ ಕೂಡ ಎಲ್ಲರೂ ಸೇರಿ ಸಂತೋಷ ಹಾಗು ಸಂಭ್ರಮ ಭರಿತ ಆಚರಣೆ ನಿಜವಾದ ಒಲವಿನ ಸಂಕೇತ ಆಗಿದೆ ಎಂದರು. ಮಕ್ಕಳ ಹಾಗೂ ಕಲಾವಿದ ಬಳಗದಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.












