





ಸವಣೂರು: ಸವಣೂರು ಮೊಗರು ಶಾಲೆಯಲ್ಲಿ ನಡೆದ ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿಯು ಕಿರಿಯರ ವಿಭಾಗದ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಹಿರಿಯರ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ಕಿರಿಯರ ವಿಭಾಗದಲ್ಲಿ ವಿವಾನ್ ಕಾರಂತ್ ( ನಾಲ್ಕನೇ ತರಗತಿ) ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಹಿಮಾನಿ ಸಿ.ಎಸ್. (ನಾಲ್ಕನೇ ತರಗತಿ) ಚಿತ್ರಕಲೆ ಪ್ರಥಮ, ಚೈತ್ರ ಜೆ (ನಾಲ್ಕನೇ ತರಗತಿ) ಕನ್ನಡ ಕಂಠಪಾಠ ಪ್ರಥಮ, ಕೌಶಿಕ್ ಎಂ.ಡಿ.- (ನಾಲ್ಕನೇ ತರಗತಿ) ದೇಶಭಕ್ತಿ ಗೀತೆ ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.






ತ್ರಿಶಾ ವಿ.ಜೆ.(ಮೂರನೇ ತರಗತಿ) ಕಥೆ ಹೇಳುವುದು ದ್ವಿತೀಯ, ಮನ್ವಿತಾ ಪಿ.ಎಸ್. (ನಾಲ್ಕನೇ ತರಗತಿ) ಅಭಿನಯ ಗೀತೆ ದ್ವಿತೀಯ, ನಿಧಿ ಆರ್.ಎ (ಮೂರನೇ ತರಗತಿ) ಭಕ್ತಿಗೀತೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಿರಿಯ ವಿಭಾಗದಲ್ಲಿ ಕ್ಲೇ ಮಾಡೇಲಿಂಗ್ನಲ್ಲಿ ತನ್ವಿತ್ ಪಿ.ಎಸ್ (7 ನೇ ತರಗತಿ ) ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ಸನ್ನಿಧಿ ಎನ್. (7 ನೇ ತರಗತಿ) ಪ್ರಥಮ, ಯಶ್ವಿ (7 ನೇ ತರಗತಿ) ಆಶು ಭಾಷಣ ಪ್ರಥಮ, ಪ್ರಬಂಧ ತೃತೀಯ, ಕಥೆ ಹೇಳುವುದು ಸನ್ನಿಧಿ ಡಿ ರೈ (ಆರನೇ ತರಗತಿ) ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಚೈತನ್ಯ (5 ನೇ ತರಗತಿ) ಭಕ್ತಿಗೀತೆ – ದ್ವಿತೀಯ, ಷಣ್ಮುಖ (7 ನೇ ತರಗತಿ ) ಇಂಗ್ಲೀಷ್ ಕಂಠಪಾಠ ತೃತೀಯ , ಆಕಾಶ್ (5 ನೇ )ಮಿಮಿಕ್ರಿ – ತೃತೀಯ , ಶ್ರೀಯಾ ಕೆ ಆರ್ (5 ನೇ ತರಗತಿ) ಕವನ ವಾಚನ – ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮುಖ್ಯಗುರು ರಶ್ಮಿತಾ ನರಿಮೊಗರು ಹಾಗೂ ಅಧ್ಯಕ್ಷರಾದ ವಿಜಯ ಗೌಡ ಮಕ್ಕಳನ್ನು ಅಭಿನಂದಿಸಿದರು. ಶಿಕ್ಷಕರಾದ ಶೋಭಾ ಕೆ. ಭಾಗೀರಥಿ, ಲೀಲಾವತಿ, ಮತ್ತು ಭವಾನಿ ತರಬೇತಿ ನೀಡಿದ್ದಾರೆ.










