





ಸವಣೂರು: ಸೇವಾಭಾರತಿ ಸವಣೂರು ಪ್ರಾಯೋಜಿತ ಸಮರ್ಥ ಜನ ಸೇವಾ ಟ್ರಸ್ಟ್, (ರಿ) ಪುಂಚಪ್ಪಾಡಿ ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಶಾಲಾ ಶತಮಾನೋತ್ಸವ ಸಮಿತಿ ಇದರ ಅಂಗವಾಗಿ ಪುಣ್ಚಪ್ಪಾಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಉಪ ವಿಭಾಗ ಇದರ ಸಹಯೋಗದಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಅಪಘಾತ ಹಾಗೂ ಆರೋಗ್ಯ ವಿಮೆಯೊಂದಿಗೆ ಅಂಚೆ ಇಲಾಖೆಯ ವಿವಿಧ ಸವಲತ್ತುಗಳ ಮಾಹಿತಿ ಶಿಬಿರ ಅ.6ರಂದು ನಡೆಯಿತು.



ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ .ಎಸ್ ವಹಿಸಿದ್ದರು.





ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಉಪ ವಿಭಾಗದ ಮೇಲ್ವಿಚಾರಕ ಆನಂದ ಗೌಡ ಸಿ. ಹಾಗೂ ಪ್ರಾಥಮಿಕ ಆರೋಗ್ಯ ಅಧಿಕಾರಿ ಪವಿತ್ರ ಅವರು ಆರೋಗ್ಯ ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ ,ಯಶೋಧಾ ನೂಜಾಜೆ, ಬಾಬು ಎನ್, ಅಂಚೆ ಪಾಲಕಿ ತಿ ರಾಜೀವಿ ರೈ ಎಂ.ಕೆ. , ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ವಿಜಯ ಗೌಡ ಕುಚ್ಚೆಜಾಲು ಉಪಸ್ಥಿತರಿದ್ದರು. ಸಮರ್ಥ ಜನ ಸೇವಾ ಟ್ರಸ್ಟ್ ಪುಂಚಪ್ಪಾಡಿ ಅಧ್ಯಕ್ಷ ಗಿರಿಶಂಕರ ಸುಲಾಯ ಸ್ವಾಗತಿಸಿ, ಮುಖ್ಯ ಶಿಕ್ಷಕಿ ರಶ್ಮಿತಾ ಜೈನ್ ವಂದಿಸಿದರು.ಸಮರ್ಥ ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಕೆ.ಸವಣೂರು ನಿರೂಪಿಸಿದರು.
ವಿದ್ಯಾರ್ಥಿಗಳು , ಪೋಷಕರು,ಊರವರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.










