





ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ,ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ನೊಂದಾವಣೆ,ತಿದ್ದುಪಡಿ ಶಿಬಿರ ಮತ್ತು ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ನ.9ರಂದು ಬೆಳಿಗ್ಗೆ 9 ರಿಂದ ಸಂಜೆ 4.30ರವರೆಗೆ ಪೆರ್ಲಂಪಾಡಿಯ ಕೊಳ್ತಿಗೆ ಪ್ರಾ.ಕೃ.ಪ.ಸಂಘದ ಸಭಾಂಗಣದಲ್ಲಿ ನಡೆಯಲಿದೆ.


ಕಾರ್ಯಕ್ರಮವನ್ನು ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ ಅವರು ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ಇದರ ಗೌರವಾಧ್ಯಕ್ಷ ವೆಂಕಪ್ಪ ನಾಯ್ಕ ವಹಿಸುವರು.ಸುಳ್ಯ ಅಂಚೆ ಇಲಾಖೆಯ ಮೇಲ್ವುಚಾರಕ ಬಾಬು ಅವರು ಅಂಚೆ ಇಲಾಖೆಯ ಮಾಹಿತಿ ನೀಡುವರು.





ಅತಿಥಿಗಳಾಗಿ ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ,ಮಾಲೆತ್ತೋಡಿ ಕಿ.ಪ್ರಾ.ಶಾಲಾ ಮುಖ್ಯಶಿಕ್ಷಕ ತಿಮ್ಮಪ್ಪ ಕೊಡ್ಲಾಡಿ,ಕೊಳ್ತಿಗೆ ಪೆರ್ಲಂಪಾಡಿ ಮರಾಟಿ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಕೆ. ಅವರು ಪಾಲ್ಗೊಳ್ಳುವರು.
ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮರಾಟಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ಇದರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







