ಕೊಕ್ಕಡದಲ್ಲಿ ನಿಲ್ಲಿಸಿದ್ದ ಆಲಂಕಾರಿನ ಯುವಕನ ಬೈಕ್ ಕಳವು

0

ನೆಲ್ಯಾಡಿ: ಕಡಬ ತಾಲೂಕಿನ ಆಲಂಕಾರಿನ ಯುವಕ ಕೊಕ್ಕಡ ಜಂಕ್ಷನ್‌ನಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ರೋ ದ್ವಿಚಕ್ರ ವಾಹನ ಕಳ್ಳತನಗೊಂಡಿರುವ ಘಟನೆ ನ.6ರಂದು ನಡೆದಿದೆ.


ಆಲಂಕಾರು ನಿವಾಸಿ ಶಿವಪ್ರಸಾದ್(30ವ.) ಅವರು ತನ್ನ ಹಿರೋ ಸ್ಪ್ಲೆಂಡರ್ ಪ್ರೋ ದ್ವಿಚಕ್ರ (ಕೆಎ 19, ಇಹೆಚ್ 7942) ವಾಹನವನ್ನು ನ.6ರಂದು ಬೆಳಿಗ್ಗೆ ಬೆಳಿಗ್ಗೆ 8-45 ಗಂಟೆಗೆ ಕೊಕ್ಕಡ ಜಂಕ್ಷನ್ ಬಳಿ ಇರುವ ಪಂಚಮಿ ಹಿತಾರ್ಯಧಾಮ ಶಿವಗಣೇಶ್ ಮೆಡಿಕಲ್ ಆವರಣದಲ್ಲಿ ನಿಲ್ಲಿಸಿ ಉಜಿರೆಗೆ ಕೆಲಸಕ್ಕೆ ಹೋಗಿದ್ದಾರೆ. ಅದೇ ದಿನ ಸಂಜೆ 6.20 ಗಂಟೆಗೆ ಕೆಲಸ ಮುಗಿಸಿ ವಾಪಾಸು ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಬೆಳಿಗ್ಗೆ 8-45 ಗಂಟೆಯಿಂದ ಸಂಜೆ 6-20 ಗಂಟೆಯ ಮದ್ಯದ ಅವಧಿಯಲ್ಲಿ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ದ್ವಿಚಕ್ರ ವಾಹನದ ಮೌಲ್ಯ ರೂ. 20,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿವಪ್ರಸಾದ್ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here