





ಪಟ್ಟೆ: ನ.6ರಂದು ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಶಾಲಾ ವಾರ್ಷಿಕ ಕ್ರೀಡೋತ್ಸವ ಜರಗಿತು.



ಕ್ರೀಡಾಕೂಟದ ಶಾಲಾ ಧ್ವಜಾರೋಹಣವನ್ನು ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ನೆರವೇರಿಸಿದರು. ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದ ವಂದನೆಯನ್ನು ಸ್ವೀಕರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ರೀಡಾಕೂಟದಲ್ಲಿ ಸೋಲೆ ಗೆಲುವಿನ ಸೋಪಾನ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಗೋಪಾಲಕೃಷ್ಣ ಭಟ್ ಕರೆ ನೀಡಿದರು.





ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿಭಾ ಪ್ರೌಢಶಾಲೆ SDMC ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರಾದ ಕೇಶವ ಪ್ರಸಾದ್ ನೀಲಗಿರಿ, ಶ್ರೀಕೃಷ್ಣ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸತೀಶ್ ಕೊಪ್ಪಳ, ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ಉಪಸ್ಥಿತರಿದ್ದರು. ಶ್ರೀ ಶಾರದ ಮಾತೆ ಮತ್ತು ಭಗವಾನ್ ಶ್ರೀ ಕೃಷ್ಣ ಸನ್ನಿಧಿಯಿಂದ ಕ್ರೀಡಾ ಜ್ಯೋತಿಯನ್ನು ತಂದು ಸಂಸ್ಥೆಯ ಅಧ್ಯಕ್ಷರು ದೀಪ ಪ್ರಜ್ವಲನೆ ಮಾಡಿ ಅಗ್ನಿಕುಂಡದಲ್ಲಿ ಜ್ಯೋತಿಯನ್ನು ಬೆಳಗಿಸಲಾಯಿತು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಂದ ಏರೋಬಿಕ್ಸ್ ವ್ಯಾಯಾಮ ಕಾರ್ಯಕ್ರಮ ನಡೆಯಿತು. ಎಂಟನೇ ತರಗತಿಯ ಕುಮಾರಿ ಲಾವಿಕಾ ಕ್ರೀಡಾ ಪ್ರತಿಜ್ಞೆಯನ್ನು ಮಾಡಿದರು. ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ರಾಜಗೋಪಾಲ್ ಸ್ವಾಗತಿಸಿ, ಪ್ರೌಢಶಾಲೆ ಮುಖ್ಯ ಗುರುಗಳಾದ ಸಮನಾ ಮಾತಾಜಿ ವಂದಿಸಿದರು. ಪ್ರೌಢಶಾಲಾ ಶಿಕ್ಷಕರಾದ ವಿಶ್ವನಾಥ್ ಗೌಡ ಬೊಳ್ಳಾಡಿ ಅವರು ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಜರಗಿತು. ಸಂಸ್ಥೆಯ ಎಲ್ಲ ಶಿಕ್ಷಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.









