





ಪುತ್ತೂರು : ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಹಲವು ಸೌಲಭ್ಯಗಳನ್ನು ಹೊಂದಿರುವ ಆರಾಧ್ಯ ಸಂಕೀರ್ಣ ನ.8ರಂದು ಬೆಳಿಗ್ಗೆ ಪೂಜಾ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಪುರೋಹಿತರಾದ ವೇ.ಮೂ. ಬ್ರಹ್ಮಶ್ರೀ ಅನಂತ ನಾರಾಯಣ ಭಟ್ ಪರಕ್ಕಜೆ ಹಾಗೂ ವೇ.ಮೂ. ಮಂಜುಳಗಿರಿ ವೆಂಕಟರಮಣ ಭಟ್ಟರವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.


ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಆರಾಧ್ಯ ಸಂಕೀರ್ಣದ ಮಾಲಕ, ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖೆಯ ಮುಖ್ಯ ಜೀವವಿಮಾ ಸಲಹೆಗಾರರಾದ ಜಿ.ಕೆ.ಪ್ರಸನ್ನ ಮತ್ತು ದೇವಿಕಾ ದಂಪತಿ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.






ಶುಭಾರಂಭದ ಪ್ರಯುಕ್ತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ 4ರಿಂದ ಕುಮಾರಿ ತನ್ಮಯಿ ಉಪ್ಪಂಗಳರವರಿಂದ ವಯಲಿನ್ ವಾದನ, ರಾಜೇಶ್ ಮಳಿ ಮತ್ತು ಶುಭಾ ರಾಜ್ ದಂಪತಿಯಿಂದ ಅಪೂರ್ವ ಜಾದೂ ವಿಸ್ಮಯ ಹಾಗೂ ಸ್ಟಾರ್ ಸುವರ್ಣ ಸಂಕಲ್ಪದ ನಿರೂಪಕಿ, ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಹಾಗೂ ಜೀ ಕನ್ನಡ ಸರಿಗಮಪ ಖ್ಯಾತಿಯ ಅಖಿಲಾ ಪಜಿಮಣ್ಣು ಮತ್ತು ಆಶ್ರೀತಾ ಸುಪ್ರಜ ಕಳಸರವರಿಂದ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.

ಒಂದೇ ಸೂರಿನಡಿ ನೂರಾರು ಸೌಲಭ್ಯ
400 ಆಸನಗಳಿರುವ ಹವಾನಿಯಂತ್ರಿತ ಮದುವೆ ಹಾಲ್ ಹವಾನಿಯಂತ್ರಿತ ಕಾನ್ಫರೆನ್ಸ್ ಹಾಲ್ ಸ್ಟಾರ್ಟ್ಅಪ್ ಕಂಪೆನಿಗಳಿಗಾಗಿ ಸುಸಜ್ಜಿತ ಕಚೇರಿ ಸಮುಚ್ಚಯ ಹವಾನಿಯಂತ್ರಿತ 24 ವಸತಿ ಕೊಠಡಿಗಳು ವಾಣಿಜ್ಯ ಮಳಿಗೆಗಳು ಈಜುಕೊಳ, ಜಿಮ್ ವ್ಯವಸ್ಥೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ವಾಕಿಂಗ್ ಪಾಥ್, ಮಕ್ಕಳ ಉದ್ಯಾನವನ ವೈಫೈ ಸೌಲಭ್ಯಗಳ ಸುಂದರ ತಾಣವಾಗಿದೆ.










